ADVERTISEMENT

ಎನ್‌ಟಿಪಿಸಿ: 3ನೇ ಘಟಕ ಕಾರ್ಯಾರಂಭ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2018, 19:30 IST
Last Updated 14 ಮಾರ್ಚ್ 2018, 19:30 IST

ಕೂಡಗಿ (ನಿಡಗುಂದಿ): ಕೂಡಗಿ ಉಷ್ಣ ವಿದ್ಯುತ್ ಸ್ಥಾವರದ ಮೂರನೇ ಘಟಕ ಮಾರ್ಚ್‌ 12ರಿಂದ ಕಾರ್ಯಾರಂಭ ಮಾಡಿದೆ ಎಂದು ರಾಷ್ಟ್ರೀಯ ಶಾಖೋತ್ಪನ್ನ ವಿದ್ಯುತ್‌ ನಿಗಮ (ಎನ್‌ಟಿಪಿಸಿ) ಬುಧವಾರ ಪ್ರಕಟಣೆಯಲ್ಲಿ ತಿಳಿಸಿದೆ.

ತಲಾ 800 ಮೆಗಾ ವಾಟ್‌ ಸಾಮರ್ಥ್ಯದ ಮೊದಲ ಮೂರೂ ಘಟಕಗಳಿಂದ 2400 ಮೆಗಾ ವಾಟ್‌ ವಿದ್ಯುತ್‌ ಉತ್ಪಾದನೆಯಾಗುತ್ತಿದೆ. ಮೊದಲನೇ ಘಟಕ ಜುಲೈ 31, 2017ರಂದು, ಎರಡನೇ ಘಟಕ 31 ಡಿಸೆಂಬರ್ 2017 ರಂದು ಕಾರ್ಯಾರಂಭಿಸಿದ್ದವು.

ಇಲ್ಲಿ ಉತ್ಪಾದನೆಯಾಗುವ ಒಟ್ಟು ವಿದ್ಯುತ್‌ನಲ್ಲಿ ಶೇ 50ರಷ್ಟು, ಅಂದರೆ 1200 ಮೆಗಾ ವಾಟ್‌ ರಾಜ್ಯದ ಬಳಕೆಗೆ ನೀಡಲಾಗುತ್ತದೆ.  ಇನ್ನುಳಿದ ವಿದ್ಯುತ್‌ ತೆಲಂಗಾಣ, ತಮಿಳುನಾಡು, ಕೇರಳ ಹಾಗೂ ಆಂಧ್ರಪ್ರದೇಶಕ್ಕೆ ಹಂಚಿಕೆಯಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.