
ಪ್ರಜಾವಾಣಿ ವಾರ್ತೆಹುಬ್ಬಳ್ಳಿ: ಇಲ್ಲಿಯ ಅಖಿಲ ಕರ್ನಾಟಕ ಜೋತಿರ್ವಿಜ್ಞಾನ ಸಂಶೋಧನಾ ಸಂಸ್ಥೆ ನಡೆಸುವ ಜೋತಿಷ ವಿಷಯಗಳಿಗೆ ಸಂಬಂಧಿಸಿದ ಪರೀಕ್ಷೆಗಳು ಏಪ್ರಿಲ್ 6ರಿಂದ 20ರ ವರೆಗೆ ರಾಜ್ಯದ ವಿವಿಧ ಕೇಂದ್ರಗಳಲ್ಲಿ ನಡೆಯಲಿವೆ.
ಹುಬ್ಬಳ್ಳಿ, ಗದಗ, ಶಿರಸಿ, ಬೆಳಗಾವಿ, ಮೈಸೂರು ಹಾಗೂ ಗುಲ್ಬರ್ಗ ಕೇಂದ್ರಗಳಲ್ಲಿ ಏಪ್ರಿಲ್ 6ರಂದು ಜೋತಿಷ ಪ್ರವೇಶಿಕಾ, 13ರಂದು ಜೋತಿಷ ವಿಶಾರದ, 20ರಂದು ಜೋತಿಷ ಆಚಾರ್ಯ ಪರೀಕ್ಷೆಗಳು ನಡೆಯಲಿವೆ.
ಪರೀಕ್ಷೆ ತೆಗೆದುಕೊಳ್ಳಲು ಇಚ್ಛಿಸುವ ತರಬೇತಿ ಪಡೆದ ವಿದ್ಯಾರ್ಥಿಗಳು ಮಾರ್ಚ್ ತಿಂಗಳ 31ರ ಒಳಗೆ ಹುಬ್ಬಳ್ಳಿಯ ತಾಡಪತ್ರಿ ಗಲ್ಲಿಯಲ್ಲಿರುವ ಸಂಸ್ಥೆಯನ್ನು ನೇರವಾಗಿ ಅಥವಾ 94481 03484 ಮೂಲಕ ಸಂಪರ್ಕಿಸಬೇಕು ಎಂದು ಸಂಸ್ಥೆಯ ಅಧ್ಯಕ್ಷ ವಿದ್ವಾನ್ ಗಣೇಶ ಹೆಗಡೆ ಪ್ರಕಟ ಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.