ಹುಬ್ಬಳ್ಳಿ: ‘ಐಎಎಸ್ ಅಧಿಕಾರಿಗಳು ಮತ್ತು ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಲಾಬಿಗೆ ಮಣಿದು ರಾಜ್ಯ ಸರ್ಕಾರ ಹೊಸ ಲೋಕಾಯುಕ್ತ ಮಸೂದೆ ಜಾರಿಗೆ ತರಲು ಹೊರಟಿದೆ’ ಎಂದು ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಭಾನುವಾರ ಇಲ್ಲಿ ಗಂಭೀರ ಆರೋಪ ಮಾಡಿದರು.
‘ಹೊಸ ಮಸೂದೆಯಲ್ಲಿ ಲೋಕಾಯುಕ್ತ ಪೊಲೀಸ್ ವಿಭಾಗವನ್ನು ರಾಜ್ಯ ಜಾಗೃತ ಆಯೋಗದ ಹಿಡಿತಕ್ಕೆ ನೀಡುವ ಪ್ರಸ್ತಾವ ಇದೆ. ಜಾಗೃತ ಆಯೋಗಕ್ಕೆ ಐಎಎಸ್ ಅಧಿಕಾರಿಗಳೇ ಮುಖ್ಯಸ್ಥರು. ಆ ಮೂಲಕ ಲೋಕಾಯುಕ್ತ ವ್ಯವಸ್ಥೆಯ ಅಧಿಕಾರವನ್ನು ಸರ್ಕಾರ ಐಎಎಸ್ ಅಧಿಕಾರಿಗಳಿಗೆ ಹಸ್ತಾಂತರಿಸುವ ಹುನ್ನಾರ ನಡೆಸಿದೆ’ ಎಂದು ಸುದ್ದಿಗೋಷ್ಠಿಯಲ್ಲಿ ಅವರು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.