ADVERTISEMENT

ಐದು ಜಿ.ಪಂ.ಗಳಿಗೆ ಫೆ. 20 ಚುನಾವಣೆ

​ಪ್ರಜಾವಾಣಿ ವಾರ್ತೆ
Published 22 ಜನವರಿ 2016, 19:47 IST
Last Updated 22 ಜನವರಿ 2016, 19:47 IST
ಐದು ಜಿ.ಪಂ.ಗಳಿಗೆ ಫೆ. 20 ಚುನಾವಣೆ
ಐದು ಜಿ.ಪಂ.ಗಳಿಗೆ ಫೆ. 20 ಚುನಾವಣೆ   

ಬೆಂಗಳೂರು: ಬೀದರ್‌, ಕಲಬುರ್ಗಿ, ಯಾದಗಿರಿ, ವಿಜಯಪುರ ಮತ್ತು ರಾಯಚೂರು ಜಿಲ್ಲಾ ಪಂಚಾಯಿತಿಗಳಿಗೆ ಫೆಬ್ರುವರಿ 20ರಂದೇ ಮತದಾನ ನಡೆಯಲಿದೆ.

ಈ ಜಿಲ್ಲಾ ಪಂಚಾಯಿತಿಗಳ ಚುನಾವಣೆಗೆ ನೀಡಿದ್ದ ತಡೆಯಾಜ್ಞೆಯನ್ನು ಹೈಕೋರ್ಟ್‌ನ ಕಲಬುರ್ಗಿ ಪೀಠ ಶುಕ್ರವಾರ ತೆರವುಗೊಳಿಸಿದೆ.

ಹಾಗಾಗಿ, ಇವುಗಳಿಗೆ ಎರಡನೆಯ ಹಂತದಲ್ಲೇ ಚುನಾವಣೆ ನಡೆಲಾಗುವುದು ಎಂದು ರಾಜ್ಯ ಚುನಾವಣಾ ಆಯುಕ್ತ ಪಿ.ಎನ್. ಶ್ರೀನಿವಾಸಾಚಾರಿ ‘ಪ್ರಜಾವಾಣಿ’ಗೆ ತಿಳಿಸಿದರು.

ಬೀದರ್‌ ತಾಲ್ಲೂಕು ಪಂಚಾಯಿತಿ ಚುನಾವಣೆಗೆ ತಡೆಯಾಜ್ಞೆ ಇದ್ದು, ಅದರ ತೆರವಿಗೆ ಪ್ರಯತ್ನಿಸಲಾಗುವುದು ಎಂದು  ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.