ADVERTISEMENT

ಐಪಿಎಸ್ ಅಧಿಕಾರಿಗಳ ವರ್ಗಾವಣೆ; ಬಡ್ತಿ

​ಪ್ರಜಾವಾಣಿ ವಾರ್ತೆ
Published 1 ಜನವರಿ 2012, 19:30 IST
Last Updated 1 ಜನವರಿ 2012, 19:30 IST

ಬೆಂಗಳೂರು: ಧಾರವಾಡದ ಪೊಲೀಸ್ ಸಂಶೋಧನೆ ಮತ್ತು ಪುನರ್‌ರಚನೆ ವಿಭಾಗದ ಎಡಿಜಿಪಿ ಹುದ್ದೆಯಲ್ಲಿದ್ದ ಡಾ.ಬಿ.ಇ.ಉಮಾಪತಿ ಡಿಜಿಪಿ ಹುದ್ದೆಗೆ ಬಡ್ತಿ ಪಡೆದಿದ್ದಾರೆ. ನಾಲ್ವರು ಐಪಿಎಸ್ ಅಧಿಕಾರಿಗಳಿಗೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರ ದರ್ಜೆಗೆ ಮತ್ತು ಮೂವರಿಗೆ ಐಜಿಪಿ ದರ್ಜೆಗೆ ಬಡ್ತಿ ನೀಡಲಾಗಿದೆ. ಇದೇ ವೇಳೆ ಒಟ್ಟು ಎಂಟು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ  ಭಾನುವಾರ ಸರ್ಕಾರ ಆದೇಶ ಹೊರಡಿಸಿದೆ.

ಉಮಾಪತಿ ಅವರನ್ನು ಬಡ್ತಿಯೊಂದಿಗೆ ಹಾಲಿ ಇರುವ ಸ್ಥಳದಲ್ಲೇ ಮುಂದುವರಿಸಲಾಗಿದೆ. ರಾಜ್ಯ ಪೊಲೀಸ್ ಮಹಾನಿರ್ದೇಶಕ ಶಂಕರ ಬಿದರಿ ಅವರನ್ನು ಕರ್ನಾಟಕ ರಾಜ್ಯ ಪೊಲೀಸ್ ವಸತಿ ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಇದು ಬಿದರಿ ಅವರಿಗೆ ಹೆಚ್ಚುವರಿ ಹೊಣೆ. ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ರೂಪಕ್ ಕುಮಾರ್ ದತ್ತ ಅವರನ್ನು ಸಿಐಡಿ ಡಿಜಿಪಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.
 
ದತ್ತ ಅವರ ಸ್ಥಾನಕ್ಕೆ ನಿಗಮದ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದ ಎಂ.ಎನ್.ರೆಡ್ಡಿ ಅವರನ್ನು ನೇಮಕ ಮಾಡಲಾಗಿದೆ.

ಎಡಿಜಿಪಿ ದರ್ಜೆಗೆ ಬಡ್ತಿ: ಗೃಹ ಇಲಾಖೆ ಕಾರ್ಯದರ್ಶಿ ರಾಘವೇಂದ್ರ ಎಚ್.ಔರಾದ್‌ಕರ್, ಬೆಂಗಳೂರು ಮಹಾನಗರ ಕಾರ್ಯಪಡೆ ಮುಖ್ಯಸ್ಥ ಡಾ.ಆರ್.ಪಿ.ಶರ್ಮ, ಸಿಐಡಿಯ ಎನ್.ಎಸ್.ಮೇಘರಿಕ್, ಅಲೋಕ್ ಮೋಹನ್- ನೇಮಕಾತಿ ಮತ್ತು ತರಬೇತಿ ವಿಭಾಗ, ಬೆಂಗಳೂರು.

ಐಜಿಪಿ ಹ್ದ್ದುದೆಗೆ ಬಡ್ತಿ: ಬೆಂಗಳೂರು ನಗರದ ಪಶ್ಚಿಮ ವಲಯದ ಅಪರಾಧ ವಿಭಾಗದ ಜಂಟಿ ಕಮಿಷನರ್ ಪ್ರಣಬ್ ಮೊಹಾಂತಿ, ನಕ್ಸಲ್ ನಿಗ್ರಹ ದಳದ ಕಮಾಂಡರ್ ಅಲೋಕ್‌ಕುಮಾರ್, ಬೆಂಗಳೂರು ನಗರದ ಪೂರ್ವ ವಲಯದ ಅಪರಾಧ ವಿಭಾಗದ ಜಂಟಿ ಕಮಿಷನರ್ ಬಿ.ದಯಾನಂದ.

ಎಸ್‌ಪಿಗಳ ವರ್ಗಾವಣೆ: ಎಚ್.ಎಸ್.ವೆಂಕಟೇಶ್- ಆಂತರಿಕ ಭದ್ರತೆ, ಬೆಂಗಳೂರು; ಈಶ್ವರಚಂದ್ರ ವಿದ್ಯಾಸಾಗರ್- ಬಾಗಲಕೋಟೆ; ಲಾಬೂರಾಮ್- ದಾವಣಗೆರೆ ಮತ್ತು ಅಭಿಷೇಕ್ ಗೋಯಲ್- ದಕ್ಷಿಣ ಕನ್ನಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.