ADVERTISEMENT

ಐವರಿಗೆ ಮುಕ್ತ ವಿವಿ ಗೌರವ ಡಾಕ್ಟರೇಟ್

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2011, 18:30 IST
Last Updated 11 ಮಾರ್ಚ್ 2011, 18:30 IST

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ 11ನೇ ಘಟಿಕೋತ್ಸವ ಮಾ.14ರಂದು ನಡೆಯಲಿದೆ. ಪ್ರೊ. ಸಿ.ಎನ್.ಆರ್.ರಾವ್ ಸೇರಿದಂತೆ ಐವರು ಗೌರವ ಡಾಕ್ಟರೇಟ್ ಪಡೆಯಲಿದ್ದಾರೆ.ರಾಷ್ಟ್ರೀಯ ಸಂಶೋಧನಾ ಪ್ರಾಧ್ಯಾಪಕರಾದ ಪ್ರೊ. ಸಿ.ಎನ್.ಆರ್.ರಾವ್, ಪ್ರೊ. ಗೋವರ್ಧನ್ ಮೆಹ್ತಾ,  ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ

ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್,  ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಪ್ರೊ. ಸಿ.ರಾಜ್‌ಕುಮಾರ್ ಹಾಗೂ ರಾಷ್ಟ್ರೋತ್ಥಾನ  ಸಾಹಿತ್ಯ ಮತ್ತು ಉತ್ಥಾನ  ಮಾಸ ಪತ್ರಿಕೆ ಪ್ರಧಾನ ಸಂಪಾದಕ ಎಸ್.ಆರ್.ರಾಮಸ್ವಾಮಿ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗುವುದು ಎಂದು ಕುಲಪತಿ ಪ್ರೊ. ಕೆ.ಎಸ್.ರಂಗಪ್ಪ ಶುಕ್ರವಾರ ಪತ್ರಿಕಾ
ಗೋಷ್ಠಿಯಲ್ಲಿ ತಿಳಿಸಿದರು.ರಾಜ್ಯಪಾಲ ಹಾಗೂ ಕುಲಾಧಿಪತಿಗಳೂ ಆಗಿರುವ ಎಚ್.ಆರ್. ಭಾರದ್ವಾಜ್ ಅಧ್ಯಕ್ಷತೆ ವಹಿಸುವರು.  ರಾಷ್ಟ್ರೀಯ ಸಲಹಾ ಮಂಡಳಿ ಸದಸ್ಯರಾದ ಡಾ.ನರೇಂದ್ರ ಜಾದವ್ ಘಟಿಕೋತ್ಸವ ಭಾಷಣ ಮಾಡುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.