ADVERTISEMENT

ಒಬಿಸಿ ಅಭಿವೃದ್ಧಿಗೆ ಸಾವಿರ ಕೋಟಿ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2012, 19:30 IST
Last Updated 3 ಫೆಬ್ರುವರಿ 2012, 19:30 IST

ಬೆಂಗಳೂರು: ಸಮಾವೇಶದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ಒಬಿಸಿ ವರ್ಗಗಳ ಅಭಿವೃದ್ಧಿಗೆ ಮುಂಬರುವ ಬಜೆಟ್‌ನಲ್ಲಿ ಕನಿಷ್ಠ 1,000 ಕೋಟಿ ರೂಪಾಯಿ ಮೀಸಲಿಡುವುದಾಗಿ ಘೋಷಿಸಿದರು.

2005-06ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತವಿದ್ದಾಗ ಈ ವರ್ಗಗಳ ಅಭಿವೃದ್ಧಿಗೆ ಕೇವಲ 104 ಕೋಟಿ ರೂ. ನೀಡಲಾಗಿತ್ತು. ಆದರೆ ಬಿಜೆಪಿ ಸರ್ಕಾರ ಕಳೆದ ಬಜೆಟ್‌ಲ್ಲಿ 760 ಕೋಟಿ ನೀಡಿತ್ತು ಎಂದರು.

ಆರಂಭದ 25 ನಿಮಿಷಗಳ ಕಾಲ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಮ್ಮ ಪಕ್ಕದಲ್ಲೇ ಕುಳಿತಿದ್ದ ಸದಾನಂದ ಗೌಡರತ್ತ ಒಮ್ಮೆ ಕೂಡ ತಿರುಗಿ ನೋಡಲಿಲ್ಲ.
ಇಬ್ಬರ ನಡುವೆ ಯಾವುದೇ ಮಾತುಕತೆಯೂ ಇರಲಿಲ್ಲ. ತಮ್ಮ ಭಾಷಣ ಮುಗಿದ ತಕ್ಷಣ, `ತುರ್ತಾಗಿ ನವದೆಹಲಿಗೆ ತೆರಳಬೇಕಿದೆ~ ಎಂದು ಕಾರ್ಯಕ್ರಮದ ನಡುವೆ ಯಡಿಯೂರಪ್ಪ ನಿರ್ಗಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.