ADVERTISEMENT

ಕಡಬ: ಪೊಲೀಸ್ ಠಾಣೆಯಲ್ಲಿ ಸ್ಫೋಟ

​ಪ್ರಜಾವಾಣಿ ವಾರ್ತೆ
Published 16 ಮೇ 2018, 18:53 IST
Last Updated 16 ಮೇ 2018, 18:53 IST

ಕಡಬ (ಉಪ್ಪಿನಂಗಡಿ): ಕಡಬ ಪೊಲೀಸ್ ಠಾಣೆಗೆ ತಾಗಿಕೊಂಡಿರುವ ಹಳೆ ಕಟ್ಟಡದಲ್ಲಿ ಬುಧವಾರ ಸಂಜೆ ಸ್ಫೋಟ ಸಂಭವಿಸಿದ್ದು, ಕಾರಣ ನಿಗೂಢವಾಗಿದೆ.

ಸಂಜೆ 7.10ರ ಸುಮಾರಿಗೆ ಭಾರಿ ಶಬ್ದ ಕೇಳಿಸಿತು. ಠಾಣೆಯ ಈ ಹಳೆ ಕಟ್ಟಡವನ್ನು ಗೃಹ ರಕ್ಷಕ ದಳದ ಕಚೇರಿಯಾಗಿ ಬಳಸಲಾಗುತ್ತಿದ್ದು, ಇಲ್ಲಿ ಇಬ್ಬರು ಸಿಬ್ಬಂದಿ ಇದ್ದರು. ಸ್ಫೋಟ ಸಂಭವಿಸುವುದಕ್ಕೆ ಕೆಲವೇ ಕ್ಷಣಗಳ ಮೊದಲು ಅವರು ಅಲ್ಲಿಂದ ತೆರಳಿದ್ದರು. ಸ್ಫೋಟದಿಂದ ಕಟ್ಟಡದ ಗೋಡೆಯಲ್ಲಿ ಬಿರುಕು ಕಾಣಿಸಿದ್ದು, ಹೆಂಚುಗಳು ಹಾರಿಹೋಗಿವೆ.

‘ಸ್ಥಳದಲ್ಲಿ ಯಾವುದೇ ಸ್ಫೋಟಕ ವಸ್ತು ಇರಲಿಲ್ಲ. ತಜ್ಞರು ಬಂದು ಪರಿಶೀಲನೆ ನಡೆಸಿದ ಬಳಿಕ ಕಾರಣ ತಿಳಿಯಬಹುದು’ ಎಂದು ಕಡಬ ಎಸ್‌ಐ ಪ್ರಕಾಶ್ ದೇವಾಡಿಗ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.