ADVERTISEMENT

ಕರಾವಳಿ, ಒಳನಾಡಿನಲ್ಲಿ ಕೆಲವೆಡೆ ಮಳೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2013, 19:59 IST
Last Updated 16 ಜುಲೈ 2013, 19:59 IST

ಬೆಂಗಳೂರು: ಮಂಗಳವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ರಾಜ್ಯದ ಕರಾವಳಿಯ ಹಲವು ಪ್ರದೇಶಗಳು ಮತ್ತು ಒಳನಾಡಿನ ಕೆಲವೆಡೆ ಮಳೆಯಾಗಿದೆ. ಆಗುಂಬೆಯಲ್ಲಿ 6 ಸೆಂ.ಮೀ ಮಳೆಯಾಗಿದೆ.

ನೀಲ್ಕುಂದ, ಹೊಸಪೇಟೆ 5, ಸುಬ್ರಹ್ಮಣ್ಯ, ಕೋಟ, ಭಟ್ಕಳ, ಕ್ಯಾಸಲ್ ರಾಕ್, ಶಿರಾಲಿ, ಭಾಗಮಂಡಲ, ಮಡಿಕೇರಿ, ತಾಳಗುಪ್ಪ, ಶೃಂಗೇರಿ, ಜಯಪುರ 4, ಧರ್ಮಸ್ಥಳ, ಪುತ್ತೂರು, ಕೊಲ್ಲೂರು, ಸಿದ್ದಾಪುರ, ಕದ್ರಾ, ಮುನಿರಾಬಾದ್, ಮಾದಾಪುರ, ತೀರ್ಥಹಳ್ಳಿ, ಕಮ್ಮರಡಿ 3, ಮೂಡುಬಿದಿರೆ, ಮಾಣಿ, ಉಪ್ಪಿನಂಗಡಿ, ಮಂಗಳೂರು ವಿಮಾನ ನಿಲ್ದಾಣ, ಕಾರ್ಕಳ, ಕುಂದಾಪುರ, ಹೊನ್ನಾವರ, ಯಲ್ಲಾಪುರ, ನಾಪೋಕ್ಲು, ಸೋಮವಾರಪೇಟೆ, ವಿರಾಜಪೇಟೆ, ಕೊಪ್ಪ, ಬಾಳೆಹೊನ್ನೂರು, ಎನ್.ಆರ್.ಪುರ, ಕೊಪ್ಪಳ, ತಿ.ನರಸೀಪುರ, ಗುಡಿಬಂಡೆ, ದೊಡ್ಡಬಳ್ಳಾಪುರ, ಕುರುಗೋಡು 2, ಮಂಗಳೂರು, ಮೂಲ್ಕಿ, ಸುಳ್ಯ, ಕುಮಟಾ, ಅಂಕೋಲ, ಸಿದ್ದಾಪುರ, ಶಿರಸಿ, ಜೋಯಿಡ, ಪಣಂಬೂರು, ಉಡುಪಿ, ಲೋಂಡ, ಹಾನಗಲ್, ಕಾಗಿನೆಲೆ,  ಗಂಗಾವತಿ, ಇಳಕಲ್, ಔರಾದ್, ರಾಯಚೂರು, ಮುದಗಲ್, ರೋಣ, ಪೊನ್ನಂಪೇಟೆ, ಮೂರ್ನಾಡು, ಸಾಗರ, ಹೊಸನಗರ, ಕೊಟ್ಟಿಗೆಹಾರ, ಮಳವಳ್ಳಿ, ದೇವನಹಳ್ಳಿ, ಹರಿಹರ, ಹರಪನಹಳ್ಳಿ, ದಾವಣಗೆರೆಯಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.

ಮುನ್ಸೂಚನೆ: ಮುಂದಿನ 48 ಗಂಟೆಗಳಲ್ಲಿ ಕರಾವಳಿ, ದಕ್ಷಿಣ ಒಳನಾಡಿನ ಜಿಲ್ಲೆಗಳು ಮತ್ತು ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.