ಲೋಕಸಭಾ ಚುನಾವಣೆ ಮುಂಬಾಗಿಲ್ಲಿ ಇರಿಸಿಕೊಂಡು ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಒಂಬತ್ತನೇ ಬಜೆಟ್ ಮಂಡಿಸಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೆ ಮೊದಲ ಆದ್ಯತೆ ನೀಡಿರುವ ಸಿದ್ದರಾಮಯ್ಯ ಅವರು ನಂತರದ ಪ್ರಾಮುಖ್ಯತೆಯನ್ನು ನಗರಾಭಿವೃದ್ಧಿಗೆ ನೀಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಇಂಧನ ಕ್ಷೇತ್ರಗಳು ತದನಂತರದ ಸ್ಥಾನ ಪಡೆದಿವೆ. 2014–15ನೇ ಸಾಲಿನ ಬಜೆಟ್ ಭಾಷಣದ ಪ್ರಮುಖಾಂಶಗಳು ಇಂತಿವೆ...
*12.33: ವಿಧಾನಸಭೆ ಪ್ರವೇಶಿಸಿದ ಮುಖ್ಯಮಂತ್ರಿ.
*12.36: ಭಾಷಣ ಆರಂಭಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅನುಮತಿ ನೀಡಿದ ಸ್ಪೀಕರ್.
*ಒಂಬತ್ತನೇ ಬಾರಿಗೆ ಬಜೆಟ್ ಮಂಡಿಸಿದ ಸಿದ್ದರಾಮಯ್ಯ.
*2013–14ರಲ್ಲಿ ರಾಜ್ಯದ ಜಿಡಿಪಿ ಶೇಕಡಾ 5.
*2013–14ರಲ್ಲಿ ಕೃಷಿ ಅಭಿವೃದ್ಧಿ ದರ 4.9 %. ಇದು ರಾಷ್ಟ್ರೀಯ ಸರಾಸರಿ ಅಭಿವೃದ್ಧಿ ದರ ಶೇ 4.6ಕ್ಕಿಂತ ಹೆಚ್ಚು.
ಯಾವ ಕ್ಷೇತ್ರಕ್ಕೆ ಎಷ್ಟು?
*ಜಲಸಂಪನ್ಮೂಲ್ ಕ್ಷೇತ್ರಕ್ಕೆ 11,349 ಕೋಟಿ ರೂ.
*ಶಿಕ್ಷಣ ಕ್ಷೇತ್ರಕ್ಕೆ 21,305 ಕೋಟಿ ರೂ.
*ಇಂಧನ ಕ್ಷೇತ್ರಕ್ಕೆ 11,693 ಕೋಟಿ ರೂ.
*ನಗರಾಭಿವೃದ್ಧಿಗೆ 9995 ಕೋಟಿ ರೂ.
*ಸಮಾಜ ಕಲ್ಯಾಣ ಕ್ಷೇತ್ರಕ್ಕೆ 6475 ಕೋಟಿ ರೂ.
* ಮಹಿಳಾ ಮತ್ತು ಮಕ್ಕಳ ಕಲ್ಯಾಣ ಕ್ಷೇತ್ರಕ್ಕೆ 3670 ಕೋಟಿ ರೂ.
*ಲೋಕೋಪಯೋಗಿ – 6634 ಕೋಟಿ ರೂ.
*ಗ್ರಾಮೀಣಾಭಿವೃದ್ಧಿಗೆ 9361 ಕೋಟಿ ರೂ.
*ಬಿಬಿಎಂಪಿಗೆ 1527 ಕೋಟಿ ರೂ.
ಹಣಕಾಸಿನ ವ್ಯವಹಾರಗಳು:
*ಬೀರ್ ಮೇಲಿನ ಅಬಕಾರಿ ತೆರಿಗೆ ಶೇಕಾಡ 122 ರಿಂದ 135ಕ್ಕೆ ಏರಿಕೆ
*ಡಿಸ್ಟಿಲರಿಗಳು ಹಾಗೂ ಬ್ರಿವರೀಸ್‌ಗಳ ಪರವಾನಗಿ ಶುಲ್ಕದಲ್ಲಿ ಶೇಕಡಾ 50 ರಷ್ಟು ಹೆಚ್ಚಳ
*ಐಷಾರಾಮಿ ಕಾರ್ ಪ್ರಯಾಣ ದುಬಾರಿ. ಪ್ರತಿ ಸೀಟ್‌ಗೆ ಪ್ರತಿ ತ್ರೈಮಾಸಿಕಕ್ಕೆ 500 ರೂಪಾಯಿ ತೆರಿಗೆ
* ಬಿಡಿಎದ ಪರ್ಯಾಯ ಸೈಟುಗಳಿಗೆ ಮುದ್ರಾಂಕ ಶುಲ್ಕ ವಿನಾಯತಿ
ಪ್ರಮುಖ ಪ್ರಕಟಣೆಗಳು:
*ಮೈಸೂರು, ಗುಲ್ಬರ್ಗಾ ಹಾಗೂ ಬೆಳಗಾವಿಯಲ್ಲಿ 250 ಹಾಸಿಗೆ ಸಾಮರ್ಥ್ಯದ ಮೂರು ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಸ್ಥಾಪನೆ
*ಹಂತ–ಹಂತವಾಗಿ ಪ್ರತಿ ಜಿಲ್ಲೆಗಳಲ್ಲೂ ವೈದ್ಯಕೀಯ ಕಾಲೇಜು ಸ್ಥಾಪನೆ. ಆರಂಭಿಕ ಹಂತವಾಗಿ ತುಮಕೂರು, ಹಾವೇರಿ, ಬಾಗಲಕೋಟೆ, ಯಾದಗಿರಿ, ಚಿಕ್ಕಬಳ್ಳಾಪುರ ಹಾಗೂ ಚಿತ್ರದುರ್ಗದಲ್ಲಿ ತಲಾ ಒಂದೊಂದು ಸ್ಥಾಪನೆ.
*ಮೈಸೂರು ಭಾಗದ ಅಭಿವೃದ್ಧಿಗೆ (ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಗಳು) ಕಾವೇರಿ ಪ್ರವಾಸೋದ್ಯಮ ಪ್ರಾಧಿಕಾರ ರಚನೆ
*ಎಲ್ಲಾ ಗ್ರಾಮಗಳಿಗೆ ಟೆಲಿಮೆಟ್ರಿಕ್ ಮಳೆ ಮಾಪಕ ವ್ಯವಸ್ಥೆ
*ಹೆದ್ದಾರಿ ಹಾಗೂ ಅರೆ ಹೆದ್ದಾರಿ ಅಭಿವೃದ್ಧಿಗೆ 500 ಕೋಟಿ
ಶಿಕ್ಷಣ
*ಪಠ್ಯಪುಸ್ತಕ ತಯಾರಿಸಲು ತಜ್ಞರ ಸಮಿತಿ ರಚನೆ
*ಕಂಪ್ಯೂಟರ್ ಆಧಾರಿತ ಆನ್‌ಲೈನ್ ಶಿಕ್ಷಣ ಆರಂಭ
* ಒಂಬತ್ತು ಹಾಗೂ ಹತ್ತನೇ ತರಗತಿಯ ಸುಮಾರು 10 ಸಾವಿರ ವಿದ್ಯಾರ್ಥಿಗಳಿಗೆ ಐಟಿ, ರಿಟೇಲ್ ಹಾಗೂ ಹೆಲ್ತ್‌ಕೇರ್ ಕ್ಷೇತ್ರಗಳ ಬಗ್ಗೆ ತರಬೇತಿ.
*ಶೈಕ್ಷಣಿಕ ಗುಣಮಟ್ಟ ಪರಿವೀಕ್ಷಣೆಗೆ ಘಟಕ ಸ್ಥಾಪನೆ
*ಕಾರವಾರದಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯ ಸ್ಥಾಪನೆ
ಬೆಂಗಳೂರಿಗೆ ಎಷ್ಟು?
*ರಸ್ತೆಗಳ ಅಭಿವೃದ್ಧಿ ಹಾಗೂ ವಿಸ್ತರಣೆಗೆ 300 ಕೋಟಿ ರೂ.
*ಪಾದಚಾರಿ ಪಥ ಅಭಿವೃದ್ಧಿಗೆ 100 ಕೋಟಿ ರೂ.
*31 ಕೆರೆಗಳ ಅಭಿವೃದ್ಧಿ ಹಾಗೂ ರಕ್ಷಣೆಗೆ 100 ಕೋಟಿ ರೂ.
*ಪಾರ್ಕಿಂಗ್ ನೀತಿ ಅನುಷ್ಠಾನಕ್ಕೆ 10 ಕೋಟಿ ರೂ.
*ಪೆರಿಫೆರಲ್ ರಿಂಗ್ ರಸ್ತೆ ಅಭಿವೃದ್ಧಿಗೆ 5800 ಕೋಟಿ ರೂ.
*ಘನ ತ್ಯಾಜ್ಯ ನಿರ್ವಹಣೆಗೆ 100 ಕೋಟಿ ರೂ.
*ಹೆದ್ದಾರಿ ಹಾಗೂ ಅರೆ ಹೆದ್ದಾರಿ ರಸ್ತೆ ಅಭಿವೃದ್ಧಿಗೆ 500 ಕೋಟಿ ರೂ.
*ಚಾಲುಕ್ಯ ವೃತ್ತದಿಂದ ಹೆಬ್ಬಾಳ ಜಂಕ್ಷನ್‌ವರೆಗೂ ಎಲಿವೇಟೆಡ್ ರಸ್ತೆ ನಿರ್ಮಾಣ
* ಅಲಿಸಾದಿಂದ ಬಸವೇಶ್ವರ ವೃತ್ತದ ವರೆಗೂ ಎಲಿವೇಟೆಡ್ ರಸ್ತೆ ನಿರ್ಮಾಣ
* ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ 8 ಸಾವಿರ ವಸತಿಗೃಹ ನಿರ್ಮಾಣ
* ಕೆಂಪೇಗೌಡ ಲೇಔಟ್‌ನಲ್ಲಿ ಮಾರ್ಚ್ ತಿಂಗಳಲ್ಲಿ 5 ಸಾವಿರ ಖಾಲಿ ನಿವೇಶನಗಳಿಗೆ ಅರ್ಜಿ ಆಹ್ವಾನ
ಮಾಧ್ಯಮ
*ಕಾರ್ಯನಿರತ ಪತ್ರಕರ್ತರಿಗೆ ಆರೋಗ್ಯ ವಿಮೆ
*ಪತ್ರಕರ್ತರ ಕುಟುಂಬಗಳಿಗೆ ಆರೋಗ್ಯ ವಿಮೆ
*ನಿವೃತ್ತ ಪತ್ರಕರ್ತರ ಪಿಂಚಣಿ 3 ರಿಂದ 6 ಸಾವಿರಕ್ಕೆ ಹೆಚ್ಚಳ
*ಬೆಂಗಳೂರಿನಲ್ಲಿ ಐದು ಕೋಟಿ ರೂಪಾಯಿ ವೆಚ್ಚದಲ್ಲಿ ಅತ್ಯಾಧುನಿಕ ಮಾಧ್ಯಮ ಕೇಂದ್ರ ಸ್ಥಾಪನೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.