ADVERTISEMENT

ಕಲಬುರ್ಗಿಯ ಶಿವಾನಂದ ದೇಶಕ್ಕೆ ಮೊದಲ ರ‍್ಯಾಂಕ್‌

‘ನೀಟ್‌’ನಲ್ಲಿ ಅಂಗವಿಕಲನ ಸಾಧನೆ

ಆರ್‌.ಜೆ.ಯೋಗಿತಾ
Published 18 ಆಗಸ್ಟ್ 2016, 19:30 IST
Last Updated 18 ಆಗಸ್ಟ್ 2016, 19:30 IST
ಶಿವಾನಂದ
ಶಿವಾನಂದ   

ಬೆಂಗಳೂರು: ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ನಡೆದಿದ್ದ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯ (ನೀಟ್‌) ಅಂಗವಿಕಲರ ವಿಭಾಗದಲ್ಲಿ ಕಲಬುರ್ಗಿ ವಿದ್ಯಾರ್ಥಿ ಶಿವಾನಂದ ದೇಶಕ್ಕೆ ಮೊದಲ ರ‍್ಯಾಂಕ್‌ ಪಡೆದಿದ್ದಾರೆ.

ನೀಟ್‌ ಪರೀಕ್ಷೆ ಬರೆದಿದ್ದರೂ, ಈಗಾಗಲೇ ಸಿಇಟಿ ಕೌನ್ಸೆಲಿಂಗ್‌ನಲ್ಲಿ ವೈದ್ಯಕೀಯ ಸೀಟು ದೊರಕಿರುವುದರಿಂದ  ಫಲಿತಾಂಶ ನೋಡುವ ಗೋಜಿಗೆ ಶಿವಾನಂದ ಹೋಗಿರಲಿಲ್ಲ. ಸ್ನೇಹಿತರ ಒತ್ತಾಯಕ್ಕೆ ಮಣಿದು ಫಲಿತಾಂಶ ನೋಡಿದರೆ ಸ್ವತಃ ಶಿವಾನಂದ ಅವರಿಗೆ ಆಶ್ಚರ್ಯ ಕಾದಿತ್ತು. ಅಂಗವಿಕಲರ ವಿಭಾಗದಲ್ಲಿ ಮೊದಲ ರ‍್ಯಾಂಕ್‌ ಪಡೆದಿದ್ದರು!

ನೀಟ್‌ ಪರೀಕ್ಷೆಯಲ್ಲಿ  ಭೌತವಿಜ್ಞಾನ 180ಕ್ಕೆ 52,  ರಸಾಯನವಿಜ್ಞಾನ180ಕ್ಕೆ 97, ಜೀವವಿಜ್ಞಾನ (ಸಸ್ಯವಿಜ್ಞಾನ ಮತ್ತು ಪ್ರಾಣಿವಿಜ್ಞಾನ) 360ಕ್ಕೆ 266 ಅಂಕಗಳನ್ನು ಗಳಿಸಿದ್ದಾರೆ. ಅಲ್ಲದೆ ಎಸ್ಸಿ ಮೀಸಲಾತಿಯಲ್ಲಿ 893ನೇ ರ‍್ಯಾಂಕ್‌ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ.
ಏಳು ವರ್ಷವಿದ್ದಾಗಲೇ ಪೋಲಿಯೊ ಪರಿ­ಣಾಮ ಬಲಗೈ ಮತ್ತು ಬಲಗಾಲು ಸ್ವಾಧೀನ ಕಳೆದುಕೊಂಡಿರುವ  ಶಿವಾನಂದ ಸೊನಾವನೆ ಚಿಕ್ಕಂದಿನಿಂದಲೂ ಎಡಗೈನಲ್ಲಿಯೇ ಬರೆಯುವುದನ್ನು ಕರಗತ ಮಾಡಿಕೊಂಡಿದ್ದಾರೆ.

ಶಿವಾನಂದ ಅವರ ತಂದೆ ಗಡ್ಡೆಪ್ಪ ಅವರು ಕಂಡಕ್ಟರ್‌ ಆಗಿ ಕೆಲಸ ಕಾರ್ಯನಿರ್ವಹಿಸುತ್ತಿದ್ದಾರೆ. ಪಿಯುಸಿ ವಿಜ್ಞಾನ ವಿಭಾಗದಲ್ಲಿ  ಶೇ 96 ಅಂಕಗಳನ್ನು ಪಡೆದಿದ್ದಾರೆ. ಸಿಇಟಿಯಲ್ಲಿ 1345ನೇ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ನಡೆದಿದ್ದ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯ (ನೀಟ್‌) ಅಂಗವಿಕಲರ ವಿಭಾಗದಲ್ಲಿ ಕಲಬುರ್ಗಿ ವಿದ್ಯಾರ್ಥಿ ಶಿವಾನಂದ ದೇಶಕ್ಕೆ ಮೊದಲ ರ‍್ಯಾಂಕ್‌ ಪಡೆದಿದ್ದಾರೆ. ಪಡೆದ ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಸೀಟು ಪಡೆದಿದ್ದಾರೆ.

‘ಡಾಕ್ಟರ್‌ ಆಗಬೇಕೆಂಬ ಆಸೆಯಿಂದ ಸಿಇಟಿಯಲ್ಲಿ ವೈದ್ಯಕೀಯ ಸೀಟು ಪಡೆದಿದ್ದೇನೆ. ಆದರೆ ಬಲಗೈ ನಿಶಕ್ತಿ ಇರುವುದರಿಂದ ಶಸ್ತ್ರಚಿಕಿತ್ಸೆಗಳನ್ನು ಹೇಗೆ ಮಾಡುವುದೆಂಬ ಸಣ್ಣ ಅಳಕು ನನ್ನಲ್ಲಿದೆ. ಈಗ ನೀಟ್‌ ಪರೀಕ್ಷೆಯಲ್ಲೂ ಮೊದಲ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ನಡೆದಿದ್ದ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯ (ನೀಟ್‌) ಅಂಗವಿಕಲರ ವಿಭಾಗದಲ್ಲಿ ಕಲಬುರ್ಗಿ ವಿದ್ಯಾರ್ಥಿ ಶಿವಾನಂದ ದೇಶಕ್ಕೆ ಮೊದಲ ರ‍್ಯಾಂಕ್‌ ಪಡೆದಿದ್ದಾರೆ. ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ’ ಎಂದು ಶಿವಾನಂದ ಖುಷಿ ಹಂಚಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.