ADVERTISEMENT

ಕಲಬುರ್ಗಿ: ಸಿಖ್ ವ್ಯಕ್ತಿಯ ಮೇಲಿನ ಹಲ್ಲೆ ಖಂಡಿಸಿ ಪ್ರಾಧ್ಯಾಪಕನಿಂದ ಏಕಾಂಗಿ ಹೋರಾಟ

​ಪ್ರಜಾವಾಣಿ ವಾರ್ತೆ
Published 11 ಜೂನ್ 2018, 9:40 IST
Last Updated 11 ಜೂನ್ 2018, 9:40 IST
ಪ್ರೊ.ಪಂಡಿತರಾವ್ ಧರೆಣ್ಣವರ
ಪ್ರೊ.ಪಂಡಿತರಾವ್ ಧರೆಣ್ಣವರ   

ಕಲಬುರ್ಗಿ: ಮಕ್ಕಳ ಕಳ್ಳ ಎಂಬ ಸಂಶಯದಿಂದ ಚಿಂಚೋಳಿ ತಾಲ್ಲೂಕು ಕೋಡ್ಲಿ ಗ್ರಾಮದಲ್ಲಿ ಸಿಖ್ ವ್ಯಕ್ತಿಯ ಮೇಲೆ ನಡೆದ ಹಲ್ಲೆ ಖಂಡಿಸಿ ವಿಜಯಪುರ ಮೂಲದ ಪ್ರಾಧ್ಯಾಪಕರೊಬ್ಬರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಏಕಾಂಗಿ ಧರಣಿ ನಡೆಸಿದ್ದಾರೆ.

ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಸಾಲುಟಗಿ ಗ್ರಾಮದ ಪ್ರೊ.ಪಂಡಿತರಾವ್ ಧರೆಣ್ಣವರ ಧರಣಿ ಮಾಡುತ್ತಿದ್ದಾರೆ.

ನಾನು ಪಂಜಾಬ್ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಸಮಾಜಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕನಾಗಿ ಕೆಲಸ ಮಾಡುತ್ತಿದ್ದೇನೆ. ಈಚೆಗೆ ಚಿಂಚೋಳಿ ತಾಲ್ಲೂಕು ಕೋಡ್ಲಿಯಲ್ಲಿ ಸಿಖ್ ವ್ಯಕ್ತಿಯ ಮೇಲೆ ಹಲ್ಲೆ ನಡೆದಿದ್ದು, ಈ ವಿಷಯ ಪಂಜಾಬ್‌ನಲ್ಲಿ ವೈರಲ್ ಆಗಿದೆ. ಕರ್ನಾಟಕದಲ್ಲಿ ಸಿಖ್ಖರಿಗೆ ರಕ್ಷಣೆ ಇಲ್ಲ ಎಂಬ ಕೂಗು ಎದ್ದಿದೆ. ಹೀಗಾಗಿ ಈ ಬಗ್ಗೆ ಜಿಲ್ಲಾಡಳಿತ ಮತ್ತು ಸರ್ಕಾರದ ಗಮನ ಸೆಳೆಯಲು ಏಕಾಂಗಿ ಧರಣಿ ನಡೆಸಿದ್ದೇನೆ ಎಂದು 'ಪ್ರಜಾವಾಣಿ'ಗೆ ತಿಳಿಸಿದರು.

ADVERTISEMENT

ಕಾಲೇಜಿಗೆ 15 ದಿನ ರಜೆ ಇದೆ. ಅದಕ್ಕಾಗಿ ಪಂಜಾಬಿನಿಂದ ನೇರವಾಗಿ ಕಲಬುರ್ಗಿಗೆ ಬಂದಿದ್ದೇನೆ. ಭಾರತದಲ್ಲಿ ಅಲ್ಪಸಂಖ್ಯಾತರಿಗೆ ರಕ್ಷಣೆ ಒದಗಿಸುವಂತೆ ಹೋರಾಟ ನಡೆಸಿದ್ದೇನೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.