
ಪ್ರಜಾವಾಣಿ ವಾರ್ತೆಬಾಗಲಕೋಟೆ: ಬಾಗಲಕೋಟೆಯಿಂದ ಹೊಸಪೇಟೆ ಕಡೆ ಚಲಿಸುತ್ತಿದ್ದ ಗೂಡ್ಸ್ ರೈಲಿನ ವ್ಯಾಗನ್‌ವೊಂದು ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಮಲ್ಲಾಪುರ ಮತ್ತು ಬಳಗಾನೂರ ರೈಲ್ವೆ ನಿಲ್ದಾಣಗಳ ಮಧ್ಯೆ ಕಳಚಿ ಬ್ದ್ದಿದು, ಈ ಮಾರ್ಗದಲ್ಲಿ ರೈಲು ಸಂಚಾರಕ್ಕೆ ತೊಂದರೆ ಉಂಟಾಗಿ ಪ್ರಯಾಣಿಕರು ಪರದಾಡುವಂತ ಪರಿಸ್ಥಿತಿ ಬುಧವಾರ ನಿರ್ಮಾಣವಾಯಿತು.
ಬಾಗಲಕೋಟೆಯಿಂದ ಹೊಸಪೇಟೆಗೆ ಹೊರಟಿದ್ದ ಖಾಲಿ ಗೂಡ್ಸ್ ರೈಲು 12.50ಕ್ಕೆ ಸಂಚಾರ ಆರಂಭಿಸಿತ್ತು ಎಂದು ರೈಲ್ವೆ ಇಲಾಖೆಯ ಹುಬ್ಬಳ್ಳಿಯ ವಿಭಾಗೀಯ ಕಮರ್ಶಿಯಲ್ ಕಂಟ್ರೋಲರ್ ಕೆ.ಎಸ್. ಕುಮಾರ ತಿಳಿಸಿದ್ದಾರೆ.
ರೈಲ್ವೆ ವ್ಯಾಗನ್ ಕಳಚಿ ರೈಲು ಸಂಚಾರಕ್ಕೆ ತಡೆಯಾಗಿದ್ದರಿಂದ ಮೈಸೂರು-ಶಿರಡಿ ರೈಲು ಹೊಳೆ ಆಲೂರು ನಿಲ್ದಾಣದಲ್ಲಿ ನಿಂತರೆ, ಸೋಲಾಪುರ-ಹುಬ್ಬಳ್ಳಿ ರೈಲು ಗದಗದಲ್ಲಿ ನಿಂತಿತ್ತು. ಇನ್ನು ಬಸವ ಎಕ್ಸ್‌ಪ್ರೆಸ್ ರೈಲು ಬಾಗಲಕೋಟೆ ರೈಲು ನಿಲ್ದಾಣದಲ್ಲಿ ತಂಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.