ADVERTISEMENT

ಕಾರವಾರದಲ್ಲಿ ಭಾರಿ ಮಳೆ: ಹಾನಿ

​ಪ್ರಜಾವಾಣಿ ವಾರ್ತೆ
Published 28 ಮೇ 2018, 7:16 IST
Last Updated 28 ಮೇ 2018, 7:16 IST
ಕಾರವಾರದಲ್ಲಿ ಭಾರಿ ಮಳೆ: ಹಾನಿ
ಕಾರವಾರದಲ್ಲಿ ಭಾರಿ ಮಳೆ: ಹಾನಿ   

ಕಾರವಾರ: ನಗರದಲ್ಲಿ ಭಾನುವಾರ ರಾತ್ರಿ ಸುರಿದ ರಭಸದ ಗಾಳಿ, ಸಿಡಿಲು ಸಹಿತ ಭಾರಿ ಮಳೆಯಿಂದ ವಾತಾವರಣ ತಂಪಾಗಿದ್ದು, ಸೆಕೆಯಿಂದ ಕಂಗೆಟ್ಟಿದ್ದ ನಾಗರಿಕರಿಗೆ ನೆಮ್ಮದಿ ತಂದಿದೆ.

ನಗರದ ನಂದನಗದ್ದಾ ಸಮೀಪದ ಅಂಬೇಡ್ಕರ್ ಕಾಲೊನಿಯಲ್ಲಿ ದೀಪಕ್ ಹುಲಸ್ವಾರ್ ಎಂಬುವವರ ಮನೆಯ ಮೇಲೆ ತೆಂಗಿನಮರವೊಂದು ಬಿದ್ದು ಹೆಂಚು, ಅಡ್ಡಪಟ್ಟಿಗಳು ಒಡೆದಿವೆ. ಚಾವಣಿಗೆ ಅಳವಡಿಸಿದ್ದ ಫ್ಯಾನ್, ವಿದ್ಯುತ್ ದೀಪಗಳಿಗೂ ಹಾನಿಯಾಗಿದೆ. ಕಾಲೊನಿಯಲ್ಲಿ ಮಾವಿನ ಮರವೊಂದು ಮುರಿದು ರಸ್ತೆಗೆ ಬಿದ್ದ ಕಾರಣ ಸಂಚಾರಕ್ಕೆ ಅಡಚಣೆಯಾಯಿತು. ಬಳಿಕ ಸ್ಥಳೀಯರು ಮತ್ತು ನಗರಸಭೆ ಕಾರ್ಮಿಕರು ತೆರವುಗೊಳಿಸಿದರು. ಈ ಭಾಗದಲ್ಲಿ ವಿದ್ಯುತ್ ತಂತಿಯೂ ತುಂಡಾಗಿದೆ.

ರಾಷ್ಟ್ರೀಯ ಹೆದ್ದಾರಿ 66ರ ಅಂಚಿನಲ್ಲಿ ಭದ್ರಾ ಹೋಟೆಲ್ ಬಳಿ ಬಿರುಕು ಕಾಣಿಸಿಕೊಂಡಿದ್ದು, ವಿಭಜಕಕ್ಕೆ ಹಾಕಿದ್ದ ಮಣ್ಣು ಕೊಚ್ಚಿಕೊಂಡು ಹೋಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.