ADVERTISEMENT

ಕುಮಟಾದಲ್ಲಿ ಹೆಚ್ಚು ಮಳೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2012, 19:30 IST
Last Updated 1 ಜುಲೈ 2012, 19:30 IST

ಬೆಂಗಳೂರು: ರಾಜ್ಯದ ಒಳನಾಡಿನಲ್ಲಿ ಮುಂಗಾರು ದುರ್ಬಲವಾಗಿದೆ. ಭಾನುವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24ಗಂಟೆಗಳಲ್ಲಿ ರಾಜ್ಯದ ಕರಾವಳಿ, ದಕ್ಷಿಣ ಮತ್ತು ಉತ್ತರ ಒಳನಾಡಿನಲ್ಲಿ ಕೆಲವೆಡೆ ಮಳೆಯಾಗಿದೆ.

ಕುಮಟಾದಲ್ಲಿ ಅತಿ ಹೆಚ್ಚು 13 ಸೆಂ.ಮೀ ಮಳೆಯಾಗಿದೆ. ಕುಂದಾಪುರ 9, ಕೊಲ್ಲೂರು, ಗೋಕರ್ಣ 8. ಶಿರಾಲಿ 6, ಸಿದ್ದಾಪುರ (ಉಡುಪಿ ಜಿಲ್ಲೆ), ಭಟ್ಕಳ, ನೀಲ್ಕುಂದ, ಹೊನ್ನಾವರ 5, ಕೋಟ, ನಾಪೊಕ್ಲು 4, ಮೂಲ್ಕಿ, ಸುಬ್ರಹ್ಮಣ್ಯ, ಗೇರುಸೊಪ್ಪ, ಅಂಕೋಲಾ, ಮಂಚಿಕೇರಿ, ಸಿದ್ದಾಪುರ (ಉತ್ತರಕ ಕನ್ನಡ), ವಿರಾಜಪೇಟೆ,

ಕಮ್ಮರಡಿ 3, ಮೂಡಬಿದರೆ, ಧರ್ಮಸ್ಥಳ, ಪುತ್ತೂರು, ಉಪ್ಪಿನಂಗಡಿ, ಸುಳ್ಯ, ಉಡುಪಿ, ಕಾರ್ಕಳ, ಕಾರವಾರ,  ಜೋಯಿಡಾ, ಕದ್ರಾ, ಲಿಂಗನಮಕ್ಕಿ, ತಾಳಗುಪ್ಪ, ಹೊಸನಗರ, ತೀರ್ಥಹಳ್ಳಿ, ಆಗುಂಬೆ, ಕೊಟ್ಟಿಗೆಹಾರ, ಮಂಗಳೂರು, ಬೆಳ್ತಂಗಡಿ, ಮಂಗಳೂರು ವಿಮಾನ ನಿಲ್ದಾಣ, ಪಣಂಬೂರು,
 
ಶಿರಸಿ, ಔರಾದ್, ಬಸವಕಲ್ಯಾಣ, ಹಾರಂಗಿ, ಮಾದಾಪುರ, ಸೊಮವಾರಪೇಟೆ, ಸಾಗರ, ಹುಂಚದಕಟ್ಟೆ, ಸೊರಬ, ಮೂಡಿಗೆರೆ, ಎನ್.ಆರ್.ಪುರ, ಸಕಲೇಶಪುರ, ಎಚ್.ಡಿ.ಕೋಟೆ, ಸರಗೂರು, ಬೇಗೂರಿನಲ್ಲಿ 1 ಸೆಂ.ಮೀ.  ಮಳೆಯಾಗಿದೆ.

ಮುನ್ಸೂಚನೆ: ಮುಂದಿನ 48 ಗಂಟೆಗಳ ಕಾಲ ರಾಜ್ಯದ ಕರಾವಳಿ ಮತ್ತು ಒಳನಾಡಿನ ಹಲವು ಪ್ರದೇಶಗಳಲ್ಲಿ ಮಳೆಯಾಗಲಿದೆ. ಕರಾವಳಿಯಲ್ಲಿ ನೈರುತ್ಯ ಭಾಗದಿಂದ ಪಶ್ಚಿಮಕ್ಕೆ 45 -55 ಕಿ.ಮೀ ಗಾಳಿ ಬೀಸುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.