ADVERTISEMENT

ಕೃತಕ ಮಳೆ ಸುರಿಸುವ ಯೋಜನೆ ಮೂರ್ಖತನದ್ದು: ನಾ. ಡಿಸೋಜ

​ಪ್ರಜಾವಾಣಿ ವಾರ್ತೆ
Published 1 ಜುಲೈ 2017, 19:30 IST
Last Updated 1 ಜುಲೈ 2017, 19:30 IST
ಕೃತಕ ಮಳೆ ಸುರಿಸುವ ಯೋಜನೆ ಮೂರ್ಖತನದ್ದು: ನಾ. ಡಿಸೋಜ
ಕೃತಕ ಮಳೆ ಸುರಿಸುವ ಯೋಜನೆ ಮೂರ್ಖತನದ್ದು: ನಾ. ಡಿಸೋಜ   

ಶಿಕಾರಿಪುರ: ‘ಕೃತಕ ಮಳೆ ಸುರಿಸಲು ಸರ್ಕಾರ ನಡೆಸುವ ಪ್ರಯತ್ನ ಮೂರ್ಖತನದಿಂದ ಕೂಡಿದೆ’ ಎಂದು ಹಿರಿಯ ಸಾಹಿತಿ ನಾ.ಡಿಸೋಜಾ ಟೀಕಿಸಿದರು.

ಮುಕ್ತಿಧಾಮ ಅಭಿವೃದ್ಧಿ ಸಮಿತಿ ಶನಿವಾರ ಪಟ್ಟಣದ ಸರ್ವಧರ್ಮಗಳ ರುದ್ರಭೂಮಿಗಳಲ್ಲಿ ಆಯೋಜಿಸಿದ್ದ ಗಿಡ ನೆಡುವ ಹಾಗೂ ಸ್ವಚ್ಛತಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರ ಕೃತಕ ಮಳೆ ಸುರಿಸಲು ಪ್ರಯತ್ನ ಮಾಡುವ ಬದಲು ಕಾಡನ್ನು ಉಳಿಸಿ, ಬೆಳೆಸಲು ಮುಂದಾಗಬೇಕು. ಮನುಷ್ಯ, ಪರಿಸರದ ಜತೆ ಬೆಳೆಯಬೇಕು ಎಂದು ಸಲಹೆ ನೀಡಿದರು.

ADVERTISEMENT

‘ಮುಕ್ತಿಧಾಮ ಅಭಿವೃದ್ಧಿ ಸಮಿತಿ ಹಿಂದೂ, ಕ್ರಿಶ್ಚಿಯನ್‌, ಮುಸ್ಲಿಂ ಸ್ಮಶಾನಗಳ ಪರಿಸರವನ್ನು ಸುಂದರವಾಗಿಸುವ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ. ನಾವು ದೊಡ್ಡ ದೊಡ್ಡ ಬಂಗಲೆಗಳನ್ನು ನಿರ್ಮಿಸಿಕೊಂಡರೂ ಕೊನೆಯಲ್ಲಿ ಮಸಣಕ್ಕೇ ಹೋಗಬೇಕು. ಆದ್ದರಿಂದ ಸ್ಮಶಾನವನ್ನು ಸುಂದರವಾಗಿಡುವ ಕಾರ್ಯವನ್ನು ಎಲ್ಲ ಧರ್ಮೀಯರು ಮಾಡಬೇಕು’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.