ರಾಯಚೂರು: ರಾಯಚೂರು ಕೃಷಿ ವಿಶ್ವವಿದ್ಯಾಲಯವು ಬಿಎಸ್ಸಿ (ಕೃಷಿ) ಮತ್ತು ಬಿ.ಟೆಕ್ (ಕೃಷಿ ತಾಂತ್ರಿಕತೆ) ಸ್ನಾತಕ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ಮೆರಿಟ್ ಲಿಸ್ಟ್ ಮಾಡುವಾಗ ಶೇ 50ರಷ್ಟು ಪಿ.ಯು.ಸಿ ಅಂಕಗಳು ಹಾಗೂ ಶೇ 50ರಷ್ಟು ಸಿ.ಇ.ಟಿ ಅಂಕಗಳನ್ನು ಗಣನೆಗೆ ತೆಗೆದುಕೊಳ್ಳಲಿದೆ ಎಂದು ಕೃಷಿ ವಿಶ್ವವಿದ್ಯಾಲಯ ಕುಲಸಚಿವ ಡಾ.ಪಿ ಬಾಲಕೃಷ್ಣನ್ ತಿಳಿಸಿದ್ದಾರೆ.
ಈ ಮೆರಿಟ್ ಲಿಸ್ಟ್ ಅನ್ನು ವಿಶ್ವವಿದ್ಯಾಲಯದ ವೆಬ್‌ಸೈಟ್‌ನಲ್ಲಿ ಕೌನ್ಸೆಲಿಂಗ್ ದಿನಾಂಕಗಳ ಮುಂಚಿತವಾಗಿ ತೋರಿಸಲಾಗುತ್ತದೆ ಎಂದರು.
ಕೃಷಿಕರ ಕೋಟಾದಡಿ ಜುಲೈ 12 ರಮದು ನಡೆಸಲು ನಿಗದಿಪಡಿಸಿದ ಪ್ರಾಯೋಗಿಕ ಪರೀಕ್ಷೆಯನ್ನು ಮುಂದೂಡಲಾಗಿದೆ. ಅದನ್ನು ಜುಲೈ 19 ರಂದು ಮುಂಜಾನೆ 9 ಗಂಟೆಗೆ ರಾಯಚೂರು ಕೃಷಿ ವಿವಿ ಆವರಣದಲ್ಲಿರುವ ಕೃಷಿ ಕಾಲೇಜಿನಲ್ಲಿ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.