
ಪ್ರಜಾವಾಣಿ ವಾರ್ತೆಗುಬ್ಬಿ: `ನನ್ನ ಜತೆ ಸಚಿವ, ಶಾಸಕರು ಬರುವುದು ಬೇಡ. ಜನರಿದ್ದಾರೆ. ಅವರೇ ನನಗೆ ಶ್ರೀರಕ್ಷೆ~ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಪಟ್ಟಣದಲ್ಲಿ ಭಾನುವಾರ ನಡೆದ ಸಾಗರನಹಳ್ಳಿ ರೇವಣ್ಣ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, `ಪ್ರಾದೇಶಿಕ ಪಕ್ಷ ಕಟ್ಟುವುದು ನಿಶ್ಚಿತ. ಡಿ.9ರಂದು ಬಿಜೆಪಿ ತೊರೆದು ಕೆಜಿಪಿ ಸೇರುತ್ತೇನೆ~ ಎಂದರು.
`ರಾಜಕೀಯವಾಗಿ ನನ್ನನ್ನು ಮುಗಿಸಲು ಬಿಜೆಪಿಯವರೇ ಷಡ್ಯಂತ್ರ ರೂಪಿಸಿದ್ದರು. ನನ್ನ ಕಣ್ಣೆದುರು ಪಕ್ಷದಲ್ಲಿ ಬೆಳೆದವರು ಕಾಲೆಳೆಯುವ ಕೆಲಸ ಮಾಡಿದರು. ಅವರಿಗೆಲ್ಲ ಮುಂಬರುವ ಚುನಾವಣೆಯಲ್ಲಿ ಪ್ರತ್ಯುತ್ತರ ನೀಡುತ್ತೇನೆ. ಪಕ್ಷದಲ್ಲೇ ಇರುವಂತೆ ಬಿಜೆಪಿ, ಆರ್‌ಎಸ್‌ಎಸ್ ಒತ್ತಡಕ್ಕೆ ಮಣಿಯುವುದಿಲ್ಲ~ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.