ADVERTISEMENT

ಕೆರೆ ಅಭಿವೃದ್ದಿಗೆ ಪ್ರಾಧಿಕಾರ ರಚನೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2013, 10:35 IST
Last Updated 12 ಜುಲೈ 2013, 10:35 IST
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ   

ಬೆಂಗಳೂರು : ರಾಜ್ಯದ ಕೆರೆಗಳ ಕ್ರಮಬದ್ಧ ಅಭಿವೃದ್ಧಿಗಾಗಿ `ಕೆರೆ ಅಭಿವೃದ್ಧಿ ಪ್ರಾಧಿಕಾರ' ಮತ್ತು ಅಂತರ್ಜಲ ನಿಯಂತ್ರಣ ಹಾಗೂ ಅಭಿವೃದ್ದಿಗಾಗಿ ನೂತನ ಅಂತರ್ಜಲ ನಿರ್ದೇಶನಾಲಯದ ಸ್ಥಾಪನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಭಾಷಣದಲ್ಲಿ ಪ್ರಕಟಿಸಿದರು.

ಸಣ್ಣ ನೀರಾವರಿ ಇಲಾಖೆಯಲ್ಲಿ ಸುಮಾರು 3,579 ಕೆರೆಗಳು ಹಾಗೂ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಇಲಾಖೆಯಡಿ ಸುಮಾರು 26 ಸಾವಿರ ಕೆರೆಗಳಿದ್ದು, ಇವು ಕೆರೆ ಅಭಿವೃದ್ದಿ ಪ್ರಾಧಿಕಾರದ ವ್ಯಾಪ್ತಿಗೆ ಬರಲಿವೆ.

ಅಂತರ್ಜಲ ನಿಯಂತ್ರಣ ಹಾಗೂ ಅಭಿವೃದ್ದಿಗೆ ವಿಶೇಷ ಒತ್ತು ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧೀನದಲ್ಲಿರುವ ಅಂತರ್ಜಲ ವಿಭಾಗವನ್ನು ಪ್ರತ್ಯೇಕಿಸಿ ನೂತನ ಅಂತರ್ಜಲ ನಿರ್ದೇಶನಾಲಯ ಸ್ಥಾಪನೆ ಮಾಡಲಾಗುವುದು ಎಂದು ಹೇಳಿದರು.

ಗಂಧದ ಮರದ ನೆಡುತೋಪುಗಳ ಹೆಚ್ಚಳ ಸಂರಕ್ಷಣೆ ಹಾಗೂ ಗಂಧದ ಮರ ಬೆಳೆಯುವ ನೈಸರ್ಗಿಕ ಪ್ರದೇಶಗಳ ಸಂರಕ್ಷಣೆ ಮತ್ತು ನಿರ್ವಹಣೆಗಾಗಿ `ಸಿರಿ ಚಂದನವನ' ಕಾರ್ಯಕ್ರಮವನ್ನು ಜಾರಿ ಮಾಡಲಾಗುವುದು ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.