ADVERTISEMENT

ಕೆಲವೆಡೆ ಮಳೆ ಸಂಭವ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2013, 19:59 IST
Last Updated 4 ಸೆಪ್ಟೆಂಬರ್ 2013, 19:59 IST

ಬೆಂಗಳೂರು: ಬುಧವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ನೈರುತ್ಯ ಮಾರುತವು ದಕ್ಷಿಣ ಒಳನಾಡಿನಲ್ಲಿ ಚುರುಕುಗೊಂಡಿದೆ. ರಾಜ್ಯದ ಕರಾವಳಿ, ಉತ್ತರ ಒಳನಾಡಿನಲ್ಲಿ ಮಳೆಯಾಗಿದೆ.

ಭಟ್ಕಳ 11 ಸೆಂ.ಮೀ, ಶಿರಾಲಿ, ಮಳವಳ್ಳಿ 8, ಸುಬ್ರಹ್ಮಣ್ಯ, ಮದ್ದೂರು, ಕನಕಪುರ 6, ಧರ್ಮಸ್ಥಳ, ನೀಲ್ಕುಂದ, ಮಂಡ್ಯ, ಕೋಲಾರ 5, ಬೆಳ್ಳೂರು, ಹೊನಕೆರೆ, ಹೊಸಕೋಟೆ 4, ಯಲಹಂಕ, ದೇವನಹಳ್ಳಿ, ಸಿರುಗುಪ್ಪ, ತಿಪಟೂರು, ಚನ್ನಪಟ್ಟಣ 3, ರಾಯಚೂರು, ಲಿಂಗನಮಕ್ಕಿ, ಕಳಸ, ಅರಸೀಕೆರೆ, ಕೊಳ್ಳೇಗಾಲ, ಕೆ.ಆರ್.ಪೇಟೆ, ಶ್ರೀರಂಗಪಟ್ಟಣ, ಮಾಲೂರು, ಬಂಗಾರಪೇಟೆ, ಶ್ರೀರಾಮಪುರ, ಕುಣಿಗಲ್ 2, ಮಂಗಳೂರು, ಬೆಳ್ತಂಗಡಿ, ಉಪ್ಪಿನಂಗಡಿ, ಭಾಗಮಂಡಲ, ಮಡಿಕೇರಿ, ಸಾಗರ, ಪಾಂಡವಪುರ, ನಾಗಮಂಗಲದಲ್ಲಿ 1 ಸೆಂ.ಮೀ ಮಳೆಯಾಗಿದೆ.

ಮುನ್ಸೂಚನೆ: ಮುಂದಿನ 48 ಗಂಟೆಗಳ ಕಾಲ ರಾಜ್ಯದ ಕರಾವಳಿ, ಉತ್ತರ ಮತ್ತು ದಕ್ಷಿಣ ಒಳನಾಡಿನ ಕೆಲವೆಡೆ ಮಳೆಯಾಗುವ ಸಂಭವವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.