ADVERTISEMENT

ಕೊಡಗಿನಲ್ಲಿ ಭಾರಿ ಮಳೆ, ಶಿವಮೊಗ್ಗದಲ್ಲಿ ದುರ್ಬಲ

​ಪ್ರಜಾವಾಣಿ ವಾರ್ತೆ
Published 18 ಜೂನ್ 2011, 19:30 IST
Last Updated 18 ಜೂನ್ 2011, 19:30 IST

ಮಡಿಕೇರಿ/ ಶಿವಮೊಗ್ಗ: ರಾಜ್ಯದ ಕೊಡಗು ಜಿಲ್ಲೆಯಾದ್ಯಂತ ಶನಿವಾರ ಬಿರುಸಿನಿಂದ ಮುಂಗಾರು ಮಳೆ ಸುರಿದಿದ್ದರೆ ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ದುರ್ಬಲವಾಗಿದೆ.

 ಕಾವೇರಿ ಉಗಮ ಸ್ಥಾನ ತಲಕಾವೇರಿ, ಭಾಗಮಂಡಲ, ಮಡಿಕೇರಿ ಸುತ್ತಮುತ್ತ ಭಾರಿ ಮಳೆ ಸುರಿದಿದೆ. ಭಾಗಮಂಡಲದಲ್ಲಿ 186.60 ಮಿ.ಮೀ. ಮಳೆ ಸುರಿದಿದ್ದು, ತ್ರಿವೇಣಿ ಸಂಗಮ ತುಂಬಿ ಹರಿಯುತ್ತಿದೆ. 

ಸಂಪಾಜೆಯಲ್ಲಿ 132.40 ಮಿ.ಮೀ, ಮಡಿಕೇರಿಯಲ್ಲಿ 94 ಮಿ.ಮೀ ಮಳೆಯಾಗಿದೆ. ಒಟ್ಟಾರೆ ಕೊಡಗು ಜಿಲ್ಲೆಯಲ್ಲಿ 73.27 ಮಿ.ಮೀ. ಸರಾಸರಿ ಮಳೆಯಾಗಿದೆ.

ಮಡಿಕೇರಿ ತಾಲ್ಲೂಕಿನಲ್ಲಿ 119.95 ಮಿ.ಮೀ., ವಿರಾಜಪೇಟೆ ತಾಲ್ಲೂಕಿನಲ್ಲಿ 66.63 ಮಿ.ಮೀ. ಹಾಗೂ ಸೋಮವಾರಪೇಟೆ ತಾಲ್ಲೂಕಿನಲ್ಲಿ 33.23 ಮಿ.ಮೀ. ಮಳೆಯಾಗಿದೆ. 

   ಹೋಬಳಿವಾರು ಮಳೆಯ ವಿವರ: ಮಡಿಕೇರಿ ಕಸಬಾ 94.20, ನಾಪೋಕ್ಲು 66.60, ಸಂಪಾಜೆ 132.40, ಭಾಗಮಂಡಲ 186.60, ವೀರಾಜಪೇಟೆ ಕಸಬಾ 61.80, ಹುದಿಕೇರಿ 85, ಶ್ರೀಮಂಗಲ 95.20, ಪೊನ್ನಂಪೇಟೆ 42.60, ಅಮ್ಮತ್ತಿ 80.20, ಬಾಳಲೆ 35, ಸೋಮವಾರಪೇಟೆ ಕಸಬಾ 43.40, ಶನಿವಾರಸಂತೆ 26, ಶಾಂತಳ್ಳಿ 72.20, ಕುಶಾಲನಗರ 8.80 ಮಿ.ಮೀ, ಕೊಡ್ಲಿಪೇಟೆ 16, ಸುಂಟಿಕೊಪ್ಪ 33ಮಿ.ಮೀ. ಮಳೆಯಾಗಿದೆ.

ಹಾರಂಗಿ ಜಲಾಶಯದ ನೀರಿನ ಮಟ್ಟ: ಹಾರಂಗಿ ಜಲಾಶಯದಲ್ಲಿ ಶನಿವಾರ 2841.71 ಅಡಿಯಷ್ಟು ನೀರು ಸಂಗ್ರಹವಾಗಿತ್ತು (ಗರಿಷ್ಠ ಮಟ್ಟ 2859 ಅಡಿಗಳು). ಇಂದಿನ ನೀರಿನ ಒಳ ಹರಿವು 1339 ಕ್ಯೂಸೆಕ್ಸ್ ಇದ್ದು, ಕಳೆದ ವರ್ಷ ಇದೇ ದಿನ ನೀರಿನ ಒಳಹರಿವು 291 ಕ್ಯೂಸೆಕ್ಸ್ ಆಗಿತ್ತು.

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯಲ್ಲಿ ಕಳೆದ 24 ಗಂಟೆಗಳಲ್ಲಿ ಅತ್ಯಧಿಕ 46.8 ಮಿ.ಮೀ. ಮಳೆಯಾಗಿದೆ. ಹೊಸನಗರದಲ್ಲಿ 5.8, ಹುಲಿಕಲ್ 59, ಮಾಸ್ತಿಕಟ್ಟೆ 51.60 ಹಾಗೂ ಯಡೂರುನಲ್ಲಿ 78 ಮಿ.ಮೀ. ಮಳೆ ಸುರಿದಿದೆ. ಶಿವಮೊಗ್ಗ 3.2, ಸಾಗರ 2.6 ಮಿ.ಮೀ. ಮಳೆಯಾಗಿದೆ. ಆದರೆ, ಅರೆಮಲೆನಾಡಿನಲ್ಲಿ ಸೊರಬ 9.0, ಶಿಕಾರಿಪುರ 8.4, ಭದ್ರಾವತಿಯಲ್ಲಿ 34.0 ಮಿ.ಮೀ. ಉತ್ತಮ ಮಳೆಯಾಗಿದೆ.

ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ಲಿಂಗನಮಕ್ಕಿ ಜಲಾಶಯದ ಒಳಹರಿವು 6,887 ಕ್ಯೂಸೆಕ್‌ಗೆ, ಭದ್ರಾ ಜಲಾಶಯದ ಒಳಹರಿವು 3,950 ಕ್ಯೂಸೆಕ್‌ಗೆ ಕುಸಿದಿದೆ. ಗಾಜನೂರು ತುಂಗಾ ಜಲಾಶಯದ ಒಳಹರಿವಿನಲ್ಲೂ ದಿಢೀರ್ ಕುಸಿತ ಕಂಡಿದ್ದು, ಶನಿವಾರ 7757 ಕ್ಯೂಸೆಕ್‌ಗೆ ಇಳಿದಿದೆ. ಅಣೆಕಟ್ಟೆಯಿಂದ ಈಗ 7,699 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.