ಚಿಕ್ಕಮಗಳೂರು: ಲೇವಾದೇವಿದಾರ ಮತ್ತು ನಗರಸಭೆ ಮಾಜಿ ಸದಸ್ಯ ಸಿ.ಜೆ.ವಿಶ್ವನಾಥ್ (ಕೋಟೆ ಶಿವಣ್ಣ) ಅವರ ಮನೆ, ಫೈನಾನ್ಸ್ ಮತ್ತು ವೈನ್ ಶಾಪ್‌ಗಳಿಗೆ ಆದಾಯ ತೆರಿಗೆ (ಐಟಿ) ಅಧಿಕಾರಿಗಳು ಶನಿವಾರ ದಾಳಿ ಮಾಡಿದ್ದಾರೆ.
ಚೆನ್ನಾಪುರ ರಸ್ತೆಯ ಮನೆ, ತೊಗರಿಯ ಹಂಕಲ್ ವೃತ್ತ ಮತ್ತು ಹಿರೇಮಗಳೂರಿನ ವೈನ್ ಶಾಪ್, ಆಜಾದ್ ಪಾರ್ಕ್ ವೃತ್ತದಲ್ಲಿ ಫೈನಾನ್ಸ್ ಕಚೇರಿಗೆ ಏಕಕಾಲಕ್ಕೆ ಅಧಿಕಾರಿಗಳ ತಂಡ ದಾಳಿ ಮಾಡಿದೆ. ಅಧಿಕಾರಿಗಳು ದಾಖಲೆಗಳು, ಬ್ಯಾಂಕ್ ಖಾತೆ ವಿವರ ಮೊದಲಾದವುಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ರಾತ್ರಿ 9 ಗಂಟೆಯಾದರೂ ದಾಖಲೆ ಪರಿಶೀಲನೆ ಮುಂದುವರಿದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.