ADVERTISEMENT

ಗತ ವೈಭವದ ದಿನಗಳು

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2013, 19:53 IST
Last Updated 10 ಏಪ್ರಿಲ್ 2013, 19:53 IST

ಮಹಿಳೆಯರಿಗೆ ಪ್ರಾತಿನಿಧ್ಯ ನೀಡಲು ಪ್ರಮುಖ ಪಕ್ಷಗಳೆಲ್ಲ ಈಗಲೂ ಮೀನಮೇಷ ಎಣಿಸುತ್ತಿವೆ. ಕಾಂಗ್ರೆಸ್‌ನಲ್ಲಿ ಟಿಕೆಟ್ ಆಕಾಂಕ್ಷಿ ಮಹಿಳೆಯರು ನಡೆಸಿದ ಪ್ರತಿಭಟನೆ ಎಲ್ಲರ ಗಮನ ಸೆಳೆದಿದೆ. ಆದರೆ ರಾಜ್ಯ ವಿಧಾನಸಭೆಗೆ 1957ರಲ್ಲಿ ನಡೆದ ಚುನಾವಣೆ ಕುರಿತು ಅದೇ ವರ್ಷದ ಫೆಬ್ರುವರಿ 12ರಂದು `ಪ್ರಜಾವಾಣಿ'ಯಲ್ಲಿ ಪ್ರಕಟವಾದ ಸುದ್ದಿಯಲ್ಲಿ, ಪುರುಷರಿಗಿಂತ ಮಹಿಳಾ ಮತದಾರರು ಹೆಚ್ಚಿಗೆ ಇರುವ 32 ಕ್ಷೇತ್ರಗಳ ವಿವರ ಇದೆ.

ಸ್ತ್ರೀ ಪ್ರಾಧಾನ್ಯ
ಚುನಾವಣೆ ನಡೆಯುವ 172 ವಿಧಾನ ಸಭಾ ಕ್ಷೇತ್ರಗಳಲ್ಲಿ 32 ಕ್ಷೇತ್ರಗಳು ಮಹಿಳಾ ಪ್ರಾಧಾನ್ಯವಾದವು.
ಮತದಾರರಲ್ಲಿ ಗಂಡಸರಿಗಿಂತ ಹೆಂಗಸರೇ ಹೆಚ್ಚಾಗಿರುವ ಈ ಕ್ಷೇತ್ರಗಳನ್ನು ಹೆಚ್ಚು ಸಂಖ್ಯೆಯಲ್ಲಿ ಪಡೆದಿರುವ ಕೀರ್ತಿ ದಕ್ಷಿಣ ಕನ್ನಡ ಜಿಲ್ಲೆಗೆ ಸಲ್ಲುತ್ತದೆ.ಈ ಜಿಲ್ಲೆಯ 12 ಕ್ಷೇತ್ರಗಳಲ್ಲಿ 11 ಕ್ಷೇತ್ರಗಳು ಮಹಿಳಾ ಪ್ರಾಧಾನ್ಯವಾದವು. ಆದರೆ ಈ ಜಿಲ್ಲೆಯಲ್ಲಿ ಮಹಿಳೆಯರಾರೂ ಸ್ಪರ್ಧಿಸಿಲ್ಲ.

ಮಹಿಳಾ ಪ್ರಾಧಾನ್ಯವಾದ ಕ್ಷೇತ್ರಗಳಿವು: ಖಾನಾಪುರ, ಕಾರವಾರ, ಹೊನ್ನಾವರ, ಹುಬ್ಬಳ್ಳಿ, ನರಗುಂದ, ಬದಾಮಿ, ಗುಳೇದಗುಡ್ಡ, ಹುನಗುಂದ, ಬೀಳಗಿ, ಅಫ್ಜಲ್‌ಪುರ, ಷಹಾಪುರ, ಲಿಂಗಸುಗೂರು, ಯಲಬುರ್ಗ, ಕೊಪ್ಪಳ, ಹಡಗಲಿ, ಸಿರುಗುಪ್ಪ, ಕುರುಗೋಡು, ಗಂಡ್ಸಿ, ಹೊಳೆನರಸೀಪುರ, ನಾಗಮಂಗಲ, ಪಾಳ್ಯಂ, ಬೆಳ್ತಂಗಡಿ, ಪಾಣೆ ಮಂಗಳೂರು, ಮಂಗಳೂರು (ಒಂದು), ಮಂಗಳೂರು (ಎರಡು), ಸುರತ್ಕಲ್, ಕಾಪು, ಉಡುಪಿ, ಬ್ರಹ್ಮಾವರ, ಕುಂದಾಪುರ, ಬೈಂದೂರು, ಕಾರ್ಕಳ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.