ADVERTISEMENT

ಗಮನ ಸೆಳೆದ ದೇಸಿ ತಳಿಗಳು

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2013, 19:50 IST
Last Updated 15 ಡಿಸೆಂಬರ್ 2013, 19:50 IST

ಕುಮಟಾ (ಉತ್ತರ ಕನ್ನಡ ಜಿಲ್ಲೆ): ಇಲ್ಲಿಯ ಮಹಾತ್ಮ ಗಾಂಧಿ  ಮೈದಾನದಲ್ಲಿ ಭಾನುವಾರ ಆರಂಭ­ವಾದ ‘ಗೋವು ಉತ್ಸವ’ದಲ್ಲಿ 30ಕ್ಕೂ ಹೆಚ್ಚು ದೇಸಿ ತಳಿಗಳು ಗಮನ ಸೆಳೆದವು.

ಗೋವಿನ ಪೂಜೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಶ್ರೀಗಳು, ‘ತಾಯಿಯ ಹಾಲೇ ಮಗುವಿಗೆ ಸರಿಯಾಗಿ ಸಿಗದಿರುವ ಇಂದಿನ ಸಂಸರ್ಭದಲ್ಲಿ ಗೋವು ಎಲ್ಲ ರೀತಿಯಿಂದ ತಾಯಿಯ ಕೆಲಸ ಮಾಡುತ್ತಿದೆ. ಗೋವುಗಳಿಂದ ಉಪಕೃತನಾದ ಮನುಷ್ಯ ಅವುಗಳನ್ನು ರಕ್ಷಿಸಬೇಕು’ ಎಂದರು.

‘ಹಾಲು ಕೊಡುವುದನ್ನು ನಿಲ್ಲಿಸಿದ ನಂತರ ಗೋವುಗಳನ್ನು ಕಸಾಯಿಖಾನೆಗೆ ನೀಡುವ ಬದಲು ಅವುಗಳನ್ನು ಸಾಕಿ ರಕ್ಷಿಸಬೇಕು. ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದೇ ಈ ಉತ್ಸವದ ಉದ್ದೇಶ’ ಎಂದು ಸ್ವಾಮೀಜಿ ವಿವರಿಸಿದರು.

ಈ ಉತ್ಸವ ಇದೇ 19ರ ವರೆಗೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.