ADVERTISEMENT

ಗುಡ್ಡ ಕುಸಿತ: 5 ತಾಸು ಹೆದ್ದಾರಿ ಬಂದ್‌

​ಪ್ರಜಾವಾಣಿ ವಾರ್ತೆ
Published 7 ಜೂನ್ 2017, 19:30 IST
Last Updated 7 ಜೂನ್ 2017, 19:30 IST
ಗುಡ್ಡ ಕುಸಿತ: 5 ತಾಸು ಹೆದ್ದಾರಿ ಬಂದ್‌
ಗುಡ್ಡ ಕುಸಿತ: 5 ತಾಸು ಹೆದ್ದಾರಿ ಬಂದ್‌   

ಭಟ್ಕಳ (ಉತ್ತರ ಕನ್ನಡ): ಸಮೀಪದ ಬೈಂದೂರು ತಾಲ್ಲೂಕು ವ್ಯಾಪ್ತಿಯ ಒತ್ತಿನೆಣೆಯಲ್ಲಿ ಬುಧವಾರ ಬೆಳಿಗ್ಗೆ ರಾಷ್ಟ್ರೀಯ ಹೆದ್ದಾರಿ–66ರ ಮೇಲೆ ಗುಡ್ಡಕುಸಿದು ಐದು ತಾಸು ವಾಹನ ಸಂಚಾರ ಸ್ಥಗಿತಗೊಂಡಿತ್ತು.

ಹೆದ್ದಾರಿ ವಿಸ್ತರಣೆ ಕಾಮಗಾರಿಗಾಗಿ ಗುಡ್ಡವನ್ನು ಅಗೆಯಲಾಗಿತ್ತು. ಕೆಲವು ದಿನಗಳಿಂದ ಇಲ್ಲಿ ವ್ಯಾಪಕ ಮಳೆಯಾಗಿದ್ದರಿಂದ ಗುಡ್ಡ ಕುಸಿದು ಹೆದ್ದಾರಿ ಮೇಲೆ ಬಿದ್ದಿದೆ.

ಇದರಿಂದ ಭಟ್ಕಳ– ಮಂಗಳೂರು ನಡುವಿನ ವಾಹನ ಸಂಚಾರಕ್ಕೆ ಅಡಚಣೆ ಆಯಿತು. 5 ತಾಸು ಜನರು ಪರದಾಡಿದರು.

ADVERTISEMENT

ಬೆಳಗಿನಜಾವ 4.30ಕ್ಕೆ ಗುಡ್ಡ ಕುಸಿದರೂ, ತೆರವು ಕಾರ್ಯಾಚರಣೆ ಆರಂಭವಾಗಿದ್ದು 7.30ಕ್ಕೆ. ಎರಡು ತಾಸು ಕಾರ್ಯಾಚರಣೆ ನಡೆಸಿ, ಹೆದ್ದಾರಿ ಮೇಲೆ ಹರಡಿದ್ದ ಮಣ್ಣನ್ನು ತೆರವುಗೊಳಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.