ADVERTISEMENT

ಗುಲ್ಬರ್ಗ ವೈದ್ಯ ಕಾಲೇಜು, ರಾಜೀವ್‌ ಗಾಂಧಿ ವಿವಿಗೆ ದಂಡ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2014, 19:30 IST
Last Updated 12 ಮಾರ್ಚ್ 2014, 19:30 IST

ಬೆಂಗಳೂರು: ಅರ್ಜಿದಾರರೊಬ್ಬರಿಗೆ ಉತ್ತರ ಪತ್ರಿಕೆಗಳ ಪ್ರತಿ ನೀಡಲು ವಿಳಂಬ ಮಾಡಿದ ಗುಲ್ಬರ್ಗದ ಎಂ.­ಆರ್‌.­ ವೈದ್ಯಕೀಯ ಕಾಲೇಜು ಮತ್ತು ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನ­­ಗಳ ವಿಶ್ವವಿದ್ಯಾಲಯ (ಆರ್‌ಜಿ­ಯುಎಚ್‌ಎಸ್) ತಲಾ ₨ 15 ಸಾವಿರ ದಂಡ ಪಾವತಿಸಬೇಕು ಎಂದು ಹೈಕೋರ್ಟ್‌ ಬುಧವಾರ ಆದೇಶಿಸಿದೆ.

ಡಾ. ವಿಜಯಸೇನ ರೆಡ್ಡಿ ಎಂಬು­ವವರು ಸಲ್ಲಿಸಿದ್ದ ಅರ್ಜಿಯ ವಿಚಾ­ರಣೆಯನ್ನು ನ್ಯಾಯ­ಮೂರ್ತಿ ಆನಂದ ಬೈರಾರೆಡ್ಡಿ ಅವರು ನಡೆಸಿ­ದರು.  ಅವರು ರೇಡಿಯಾ­ಲಜಿ ವಿಷಯದಲ್ಲಿ ಸ್ನಾತಕೋತ್ತರ ಪರೀಕ್ಷೆ ಬರೆ­ದಿದ್ದರು. ಫಲಿತಾಂಶ ತಮ್ಮ ನಿರೀಕ್ಷೆ­ಯಂತೆ ಬಾರದ ಕಾರಣ ಉತ್ತರ ಪತ್ರಿಕೆ­­­ಗಳ ಪ್ರತಿ ನೀಡುವಂತೆ ಅರ್ಜಿ
ಸಲ್ಲಿಸಿದ್ದರು. ಆದರೆ ನಿಗದಿತ ಸಮಯ­ದಲ್ಲಿ ಪ್ರತಿಗಳು ದೊರೆ­ಯಲಿಲ್ಲ. ಹೀಗಾಗಿ ಅವರು ಕೋರ್ಟ್‌ ಮೆಟ್ಟಿಲೇರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.