ನವದೆಹಲಿ: `ಸದಾನಂದಗೌಡ ಅವರನ್ನು ಮುಖ್ಯಮಂತ್ರಿ ಮಾಡಿದ್ದು ಲಿಂಗಾಯಿತರೇ ವಿನಾ ಒಕ್ಕಲಿಗರಲ್ಲ. ದೇವೇಗೌಡ ಅಥವಾ ಅವರ ಪುತ್ರ ಕುಮಾರಸ್ವಾಮಿಯೂ ಅಲ್ಲ. ಲಿಂಗಾಯತರು ಎಂದೂ ಜಾತಿವಾದ ಮಾಡಿಲ್ಲ~ ಎಂದು ಯಡಿಯೂರಪ್ಪ ಅವರಿಗೆ ನಿಷ್ಠರಾದ ಬೆಳಗಾವಿ ಲೋಕಸಭಾ ಸದಸ್ಯ ಸುರೇಶ್ ಅಂಗಡಿ ಆದಿಚುಂಚನಗಿರಿಯ ಬಾಲಗಂಗಾಧರ ಸ್ವಾಮೀಜಿ ಅವರಿಗೆ ತಿರುಗೇಟು ನೀಡಿದರು.
ಲಿಂಗಾಯತರು ಯಾವಾಗಲೂ ಜಾತ್ಯತೀತ ಮನೋಭಾವದವರು. ಸ್ವಾಮೀಜಿ ಹೇಳಿಕೆ ನೋವು ತಂದಿದೆ. ಸದಾನಂದಗೌಡರು ಮುಖ್ಯಮಂತ್ರಿ ಸ್ಥಾನವನ್ನು ಯಡಿಯೂರಪ್ಪ ಅವರಿಗೆ ಬಿಟ್ಟು ರಾಜಕೀಯ ಮೇಲ್ಪಂಕ್ತಿ ಹಾಕಬೇಕು ಎಂದು ಸುರೇಶ್ ಅಂಗಡಿ ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.