ಬೆಂಗಳೂರು: ಕರ್ನಾಟಕ ಗ್ಯಾಸೆಟಿಯರ್ ಇಲಾಖೆಯು ಹೊರ ತಂದಿರುವ ಕೋಲಾರ ಜಿಲ್ಲಾ ಗ್ಯಾಸೆಟಿಯರ್ ಆಂಗ್ಲ ಆವೃತ್ತಿ, ಉಡುಪಿ ಜಿಲ್ಲಾ ಗ್ಯಾಸೆಟಿಯರ್ ಆಂಗ್ಲ ಆವೃತ್ತಿ ಸೇರಿದಂತೆ ಹಲವು ಗ್ಯಾಸೆಟಿಯರ್‌ಗಳ ಸಂಪುಟಗಳನ್ನು ಬುಧವಾರ ಬಿಡುಗಡೆ ಮಾಡಲಾಯಿತು.
ಬಿಡುಗಡೆಯಾದ ಇತರ ಸಂಪುಟ ಗಳೆಂದರೆ ರಾವ್ ಬಹದ್ದೂರ್ ಸಿ. ಹಯವದನರಾವ್ ಸಂಪಾದಿತ ಮೈಸೂರು ಗ್ಯಾಸೆಟಿಯರ್ -5 ಸಂಪುಟಗಳು (9 ಪುಸ್ತಕಗಳು) ಮರುಮುದ್ರಣ, ಗ್ಲಿಂಪ್ಸಸ್ ಆಫ್ ಕರ್ನಾಟಕ, ಇಂಪೀರಿಯಲ್ ಗ್ಯಾಸೆಟಿಯರ್ ಪ್ರಾವಿನ್ಸಿಯಲ್ ಸೀರೀಸ್ ಮಾಲಿಕೆ- ಬೀದರ್, ರಾಯಚೂರು ಮತ್ತು ಗುಲ್ಬರ್ಗಾ ಜಿಲ್ಲಾ ಗ್ಯಾಸೆಟಿಯರ್‌ಗಳು (ಮರುಮುದ್ರಣ).
ಗ್ಯಾಸೆಟಿಯರ್ ಪುಸ್ತಕಗಳ ಬೆಲೆ ಪುಸ್ತಕದ ಮೇಲೆ ನಮೂದಾಗದೆ ಇದ್ದಿದ್ದರಿಂದ, ಗ್ರಾಹಕರಲ್ಲಿ ಗೊಂದಲ ಉಂಟಾಯಿತು.
ಕರ್ನಾಟಕ ಗ್ಯಾಸೆಟಿಯರ್ ಇಲಾಖೆಯ ಮುಖ್ಯ ಸಂಪಾದಕಿ ನೀಲಾ ಮಂಜುನಾಥ್ ಮಾತನಾಡಿ, `ಬೆಲೆ ನಿಗದಿ ಮಾಡುವಂತೆ ಸರ್ಕಾರಕ್ಕೆ ಪ್ರತಿಗಳನ್ನು ಕಳುಹಿಸಿಕೊಟ್ಟಿದ್ದೇವೆ. ಸರ್ಕಾರ ಅಧಿಕೃತವಾಗಿ ಬೆಲೆ ನಿಗದಿ ಮಾಡಿದ ನಂತರ ಪುಸ್ತಕಗಳ ಮಾರಾಟವಾಗುತ್ತದೆ. ಬಿಡುಗಡೆ ಕಾರ್ಯಕ್ರಮದ ಪ್ರಯುಕ್ತ ಇಂದು 50 ಪುಸ್ತಕಗಳನ್ನು ಮಾತ್ರ ಮಾರಾಟ ಮಾಡಲಾಗುವುದು~ ಎಂದು ಸಮಜಾಯಿಷಿ ನೀಡಿದರು.
`ಇಲಾಖೆಯು ಪ್ರಾಯೋಗಿಕ ಯೋಜನೆಯಡಿಯಲ್ಲಿ ಮೈಸೂರು ಜಿಲ್ಲೆಗೆ ಸಂಬಂಧಿಸಿದಂತೆ ತಾಲ್ಲೂಕಾವಾರು ಗ್ಯಾಸೆಟಿಯರ್‌ಗಳನ್ನು ಪ್ರಕಟಿಸಿದೆ. ವಿಶೇಷ ಪ್ರಕಟಣೆಯಾಗಿ `ಗ್ಲಿಂಪ್ಸಸ್ ಆಫ್ ಕರ್ನಾಟಕ~ ಗ್ರಂಥವನ್ನು ಪ್ರಕಟಿಸಿದೆ~ ಎಂದು ಅವರು ಮಾಹಿತಿ ನೀಡಿದರು.
ಗ್ಯಾಸೆಟಿಯರ್ ಸಂಪುಟಗಳ ಬಿಡುಗಡೆ ಹಾಗೂ ಪುನರ್ ವಿನ್ಯಾಸಗೊಳಿಸಿದ ಇಲಾಖಾ ವೆಬ್‌ಸೈಟ್‌ಗೆ ಚಾಲನೆ ನೀಡಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಹಾಗೂ ವಾರ್ತಾ ಇಲಾಖೆ ಕಾರ್ಯದರ್ಶಿ ಬಸವರಾಜು, `ಗ್ಯಾಸೆಟಿಯರ್ ತುಂಬ ಉಪಯುಕ ್ತವಾದ ಪುಸ್ತಕವಾಗಿದೆ. ಆದರೆ, ಇದು ಎ್ಲ್ಲಲ ಗ್ರಂಥಾಲಯಗಳಲ್ಲೂ ದೊರೆಯುವಂತಾಗಬೇಕು. ಹೊರಗೆ ಮಾರುಕಟ್ಟೆ ಮಳಿಗೆಯಲ್ಲಿಯೂ ಈ ಬಹು ಉಪಯೋಗಿ ಗ್ಯಾಸೆಟಿಯರ್‌ಗಳು ದೊರೆಯಬೇಕು~ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಿಬಿಎಂಪಿ ಹೆಚ್ಚುವರಿ ಆಯುಕ್ತ ಅನೀಶ್ ಸಿರಾಜ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.