ADVERTISEMENT

ಗ್ರಾ.ಪಂ. ಚುನಾವಣೆ: ಕೊಪ್ಪಳದಲ್ಲಿ ಲಾಟರಿ ವಿಜಯ

​ಪ್ರಜಾವಾಣಿ ವಾರ್ತೆ
Published 5 ಜೂನ್ 2015, 7:13 IST
Last Updated 5 ಜೂನ್ 2015, 7:13 IST
ಕೊಪ್ಪಳದಲ್ಲಿ ಗವಿಸಿದ್ದೇಶ್ವರ ಪ್ರೌಢಶಾಲೆಯಲ್ಲಿ ಮತ ಎಣಿಕೆ ನಡೆಯುತ್ತಿರುವುದು.
ಕೊಪ್ಪಳದಲ್ಲಿ ಗವಿಸಿದ್ದೇಶ್ವರ ಪ್ರೌಢಶಾಲೆಯಲ್ಲಿ ಮತ ಎಣಿಕೆ ನಡೆಯುತ್ತಿರುವುದು.   

ಕೊಪ್ಪಳ: ಕೊಪ್ಪಳದ ಎರಡು ಗ್ರಾಮ ಪಂಚಾಯ್ತಿಗಳಲ್ಲಿ ಚುನಾವಣಾ ಕಣದಲ್ಲಿದ್ದ ಅಬ್ಯರ್ಥಿಗಳಿಬ್ಬರು ಸಮಾನ ಮತಗಳನ್ನು ತೆಗೆದುಕೊಂಡ ಕಾರಣ, ಕೊನೆಗೆ ಲಾಟರಿ ಮೂಲಕ ಫಲಿತಾಂಶ ನಿರ್ಧರಿಸಿದ ಘಟನೆ ಶುಕ್ರವಾರ ನಡೆದಿದೆ.

ಕೊಪ್ಪಳದ ಮಾದಿನೂರು ಮತ್ತು ಗಂಗಾವತಿಯ ಸಂಕನಾಳ ಗ್ರಾಮಪಂಚಾಯ್ತಿಗಳು ಈ ಸ್ವಾರಸ್ಯಕರ ಘಟನೆಗೆ ಸಾಕ್ಷಿಯಾಗಿವೆ.

ಕೊಪ್ಪಳದ ದೇವಲಾಪುರ ಗ್ರಾಮ ಪಂಚಾಯ್ತಿಯಲ್ಲಿ  ಲಾಟರಿ ಮೂಲಕ ಚೇತನ ದೊಡ್ಡರಂಗಪ್ಪ ಬಾರಿಕೇರ ಅವರನ್ನೂ  ಮತ್ತು ಗಂಗಾವತಿಯ ಸಂಕನಾಳ ಗ್ರಾಮ ಪಂಚಾಯ್ತಿಯಲ್ಲಿ ಅಭ್ಯರ್ಥಿಯೊಬ್ಬರನ್ನು ಲಾಟರಿ ಮೂಲಕ ವಿಜಯಿಗಳೆಂದು ಘೋಷಿಸಲಾಯಿತು.

ದೇವಲಾಪುರ ಗ್ರಾಮ ಪಂಚಾಯ್ತಿಯಲ್ಲಿ ಚೇತನ ದೊಡ್ಡರಂಗಪ್ಪ ಬಾರಿಕೇರ ಮತ್ತು ಸೊಮಪ್ಪ ಹನುಮಂತಪ್ಪ ಬಾರಿಕೇರ ಇಬ್ಬರೂ 130 ಮತಗಳನ್ನು ಪಡೆದಿದ್ದರು.

ಗಂಗಾವತಿಯ ಸಂಕನಾಳ ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ಇಬ್ಬರು ಅಭ್ಯರ್ಥಿಗಳಿಗೆ ಸಮನಾಗಿ 124 ಮತಗಳು ಬಿದ್ದಿವೆ. ಲಾಟರಿ ಮೂಲಕ ಅಭ್ಯರ್ಥಿ ಬಸವರಾಜು ಅವರನ್ನು ಆಯ್ಕೆ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT