ADVERTISEMENT

ಗ್ರಾಮೀಣ ವಿಶ್ವವಿದ್ಯಾಲಯ ಸ್ಥಾಪನೆಗೆ ವಿವೇಕ ರೈ ಸಲಹೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2013, 19:30 IST
Last Updated 19 ಡಿಸೆಂಬರ್ 2013, 19:30 IST

ರತ್ನಾಕರವರ್ಣಿ ವೇದಿಕೆ: ‘ಬುನಾದಿ ಹಂತದಲ್ಲೇ ಕನ್ನಡವನ್ನು ಭದ್ರಗೊ ಳಿಸುವ ಕೆಲಸ ಸಮರ್ಪಕವಾಗಿ ಆಗದಿ ದ್ದರೆ ಹೊರಜಗತ್ತಿಗೆ ಕನ್ನಡವನ್ನು ನಮ್ಮ ಹೆಮ್ಮೆಯ ಗುರುತಾಗಿ ತೋರಿಸಲು ಸಾಧ್ಯವಿಲ್ಲ, ಆಧುನಿಕ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಳ್ಳದಿದ್ದರೂ ಕನ್ನಡದ ಬೆಳವಣಿಗೆ ಅಸಾಧ್ಯ ಎಂದು ಹೇಳಿರುವ ಆಳ್ವಾಸ್ ವಿಶ್ವನುಡಿಸಿರಿ ವಿರಾಸತ್‌ನ ಸರ್ವಾಧ್ಯಕ್ಷ ಡಾ.ಬಿ.ಎ. ವಿವೇಕ ರೈ, ನಮ್ಮ ಮಕ್ಕಳಿಗೆ ಕೇವಲ ಕನ್ನಡ ಮಾಧ್ಯಮದಲ್ಲೇ ಕಲಿಸಿದರೆ ಸಾಲದು, ಕನ್ನಡದಲ್ಲಿ ಕಲಿತವರಿಗೆ ಕನ್ನಡ ಭಾಷೆಯು ‘ಅನ್ನದ ಭಾಷೆ’ಯಾ ಗುವಂತೆ ನೋಡಿಕೊ ಳ್ಳಬೇಕು’ ಎಂದು ಸಲಹೆ ನೀಡಿದ್ದಾರೆ.

ಗ್ರಾಮೀಣ ಮತ್ತು ಬುಡಕಟ್ಟು ಸಮುದಾಯಗಳ ಶಿಕ್ಷಣ ಮತ್ತು ಅಭಿ ವೃದ್ಧಿಯ ದೃಷ್ಟಿಯಿಂದ ಹೊಸ ಆಂದೋ ಲನ ರೂಪದಲ್ಲಿ ಗ್ರಾಮೀಣ ವಿಶ್ವವಿ ದ್ಯಾಲಯ ಎಂಬ ಪರಿಕಲ್ಪ ನೆಯೊಂದನ್ನು ರೂಪಿಸಬೇಕು. ಇದನ್ನು ಪ್ರಾಯೋ ಗಿಕವಾಗಿ ಕರ್ನಾಟಕದ ಕೆಲವು ಪ್ರದೇಶ ಗಳಲ್ಲಿ ಆರಂಭಿಸಿ ಶಿಕ್ಷಣ ಮತ್ತು ಅಭಿ ವೃದ್ಧಿ ಎಂಬ ಪರಿಕಲ್ಪನೆಗಳಿಗೆ ಹೊಸ ಅರ್ಥಗಳನ್ನು ಕಲ್ಪಿಸಬಹುದು ಎಂದು ಅವರು ಗುರುವಾರ ಸಂಜೆ ಇಲ್ಲಿ ಆಳ್ವಾಸ್ ವಿಶ್ವನುಡಿಸಿರಿ ವಿರಾಸತ್‌ನ ಸರ್ವಾಧ್ಯಕ್ಷರ ನೆಲೆಯಲ್ಲಿ ಮಾಡಿದ ಭಾಷಣದಲ್ಲಿ ಸೂಚಿಸಿದರು.

ಎಚ್. ನರಸಿಂಹಯ್ಯ, ಚಂಪಾ, ಬರಗೂರು, ಗೋಕಾಕರ ನೇತೃತ್ವದಲ್ಲಿ ರಚಿಸಲಾದ ವರದಿಗಳು ಸರ್ಕಾರದ ಕಪಾಟು ಸೇರಿವೆ. ಇದಕ್ಕೆ ಸಂಬಂಧಿ ಸಿದಂತೆ ನ್ಯಾಯಾ ಲಯದಲ್ಲಿ ಇರುವ ತಡೆಯಾಜ್ಞೆಯನ್ನು ತೆರವು ಮಾಡುವ ಕಾರ್ಯ ಇಂದಿಗೂ ಆಗಿಲ್ಲ. ನಮ್ಮ ಸರ್ಕಾರಗಳಿಗೆ ಕನ್ನಡ ಮಾಧ್ಯಮ / ಏಕರೂಪ ಶಿಕ್ಷಣ ಜಾರಿಗೊಳಿಸಲು ಕರ್ತೃತ್ವ ಶಕ್ತಿ ಇಲ್ಲ. ಕನ್ನಡವನ್ನು ಅನ್ನದ ಭಾಷೆಯನ್ನಾಗಿ ಮಾಡಲು, ಕನ್ನಡ ನಾಡಿ ನಲ್ಲಾದರೂ ಕನ್ನಡಿಗರಿಗೇ ಉದ್ಯೋಗ ಎನ್ನುವ ಬಹಳ ಕಾಲದ ಬಯಕೆ ನಿಜವಾಗಬೇಕು ಎಂದು ರೈ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.