ಚಳ್ಳಕೆರೆ: ಬೆಂಗಳೂರಿನ ಖಾಸಗಿ ಪ್ರವಾಸಿ ಏಜೆನ್ಸಿ ಮೂಲಕ ಚಾರ್‌ಧಾಮ್ ಯಾತ್ರೆಗೆ ತೆರಳಿದ್ದ ಚಳ್ಳಕೆರೆ ಪಟ್ಟಣದ ಸುಮಾರು 20 ಯಾತ್ರಿಗಳು ಸುರಕ್ಷಿತವಾಗಿ ಇದ್ದಾರೆ ಎಂದು ತಿಳಿದು ಬಂದಿದೆ.
ಚಳ್ಳಕೆರೆಯಿಂದ ಕಳೆದ ವಾರ ಬೆಂಗಳೂರಿನ ಪ್ರವಾಸಿ ಏಜೆನ್ಸಿಯೊಂದಿಗೆ ಡೆಹ್ರಾಡೂನ್‌ಗೆ ತೆರಳಿ ಅಲ್ಲಿಂದ ಯಾತ್ರೆ ಆರಂಭಿಸಿದ ಕೆಲವೇ ಗಂಟೆಗಳಲ್ಲಿ ಭಾರಿ ಮಳೆ ಪ್ರಾರಂಭವಾಗಿ ಮಾರ್ಗ ಮಧ್ಯೆ ಗ್ರಾಮವೊಂದರಲ್ಲಿ ಕಳೆದ ಆರು ದಿನಗಳಿಂದ ವಾಸ್ತವ್ಯ ಹೂಡಿದ್ದ ಈ ತಂಡ ಗುರುವಾರ ಸುರಕ್ಷಿತವಾಗಿ ಹರಿದ್ವಾರದತ್ತ ಪ್ರಯಾಣ ಬೆಳೆಸಿದೆ.
ತಂಡದಲ್ಲಿ ಇದ್ದ ಚಳ್ಳಕೆರೆ ಆರ‌್ಯವೈಶ್ಯ ಸಂಘದ ಅಧ್ಯಕ್ಷ ಸಿ.ಎಸ್.ಪ್ರಸಾದ್ `ಪ್ರಜಾವಾಣಿ' ಜತೆ ಮಾತನಾಡಿ, ಯಾತ್ರೆಯನ್ನು ರದ್ದು ಪಡಿಸಿ ಹಿಂತಿರುಗುವುದಾಗಿ ತಿಳಿಸಿದರು. ಈ ತಂಡದಲ್ಲಿ ಪಟ್ಟಣದ ಎಚ್.ಸಿ.ತಿಪ್ಪೇಸ್ವಾಮಿ, ಎಂ.ಜಿ.ರಾಮಮೂರ್ತಿ ಮೊದಲಾದವರು ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.