ADVERTISEMENT

ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಹೆಲಿರೈಡ್: ಹದ್ದು ಡಿಕ್ಕಿಯಾಗಿ ಹೆಲಿಕಾಪ್ಟರ್ ಗಾಜು ಪುಡಿ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2017, 10:09 IST
Last Updated 1 ಅಕ್ಟೋಬರ್ 2017, 10:09 IST
ಹೆಲಿಕಾಪ್ಟರ್‌ನ ಮುಂದಿನ ಗಾಜು ಪುಡಿಯಾಗಿದೆ.
ಹೆಲಿಕಾಪ್ಟರ್‌ನ ಮುಂದಿನ ಗಾಜು ಪುಡಿಯಾಗಿದೆ.   

ಮೈಸೂರು: ದಸರಾ ಪ್ರಯುಕ್ತ ಇಲ್ಲಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ನಡೆಯುತ್ತಿರುವ ಹೆಲಿರೈಡ್‌ನ ಹೆಲಿಕಾಪ್ಟರ್‌ಗೆ ಹದ್ದೊಂದು ಡಿಕ್ಕಿ ಹೊಡೆದು ಪೈಲೆಟ್ ಮುಂಭಾಗದ ಗಾಜು ಪುಡಿಯಾಗಿದೆ.

ಭಾನುವಾರ ಬೆಳಿಗ್ಗೆ 9ಕ್ಕೆ 6 ಜನ ಪ್ರಯಾಣಿಕರೊಂದಿಗೆ ಹೆಲಿಕಾಪ್ಟರ್ ಮೇಲೆ ಹಾರಿತ್ತು. ಆಗಸದಲ್ಲಿ ಹದ್ದು ಏಕಾಏಕಿ ಡಿಕ್ಕಿ ಹೊಡೆದಿದೆ. ಪಕ್ಷಿಯ ರಕ್ತ ಪೈಲೆಟ್ ಮುಂಭಾಗದ ಗಾಜಿನ ಮೇಲೆ ಚೆಲ್ಲಿದೆ. ತಕ್ಷಣ ನಿಯಂತ್ರಣ ತಪ್ಪದಂತೆ ಜಾಗೃತಿ ವಹಿಸಿದ ಪೈಲೆಟ್ ಶ್ರೀನಿವಾಸ ರಾವ್ ಸುರಕ್ಷಿತವಾಗಿ ಹೆಲಿಪ್ಯಾಡ್‌ಗೆ ಮರಳಿದ್ದಾರೆ.

'ಇದರಿಂದ ಯಾರಿಗೂ ತೊಂದರೆ ಆಗಿಲ್ಲ. ಯಾರೂ ಗಾಬರಿ ಪಡಬೇಕಾಗಿಲ್ಲ. ಡಿಜಿಸಿಎ ಧಾವಿಸಿ ಪರಿಶೀಲಿಸಿದ ನಂತರ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ' ಎಂದು ಪವನ್ ಹನ್ಸ್ ಮೂಲಗಳು ಮಾಹಿತಿ ನೀಡಿವೆ.

ADVERTISEMENT

ಜಿಲ್ಲಾಧಿಕಾರಿ ಡಿ.ರಂದಿಪ್ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.