ADVERTISEMENT

ಜಿ. ಕುಮಾರಪ್ಪ ನಿಧನ

​ಪ್ರಜಾವಾಣಿ ವಾರ್ತೆ
Published 6 ಜೂನ್ 2012, 19:30 IST
Last Updated 6 ಜೂನ್ 2012, 19:30 IST
ಜಿ. ಕುಮಾರಪ್ಪ ನಿಧನ
ಜಿ. ಕುಮಾರಪ್ಪ ನಿಧನ   

ಚಿತ್ರದುರ್ಗ:  ಸಾಹಿತ್ಯ ವಲಯದಲ್ಲಿ ತಮ್ಮದೇ  ಆದ ಛಾಪು  ಮೂಡಿಸಿದ್ದ  ಹೊಳಲ್ಕೆರೆ  ತಾಲ್ಲೂಕಿನ ಬಸಾಪುರ ಗ್ರಾಮದ ಜಿ. ಕುಮಾರಪ್ಪ ಬಸಾಪುರ (55 ) ಬುಧವಾರ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ  ಅವರು, ಕೆಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಕೋಲ್ಕತ್ತದ ಬಂಗಾಲಿ ನ್ಯಾಷನಲ್ ಗ್ರಂಥಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದರು. `ಧೀಮಂತ~ ಕವನ ಸಂಕಲನ ಹಾಗೂ `ಜಪಾನಿ ಹೈಕಗಳು~ ಕೃತಿ ರಚಿಸಿದ್ದರು.  ಹಲವಾರು ಬೆಂಗಾಲಿ ಕೃತಿಗಳನ್ನು ಅವರು ಕನ್ನಡಕ್ಕೆ ಅನುವಾದಿಸಿದ್ದರು.

ಅವರಿಗೆ ತಂದೆ, ತಾಯಿ ಹಾಗೂ ಪತ್ನಿ ಕೋಮಲಾ, ಪುತ್ರಿ ದಿವ್ಯಾ ಮತ್ತು ಇಬ್ಬರು ಸಹೋದರರು, ಸಹೋದರಿ ಇದ್ದಾರೆ.  ಅಂತ್ಯಕ್ರಿಯೆ ಗುರುವಾರ ಬೆಳಿಗ್ಗೆ 11ಕ್ಕೆ ಬಸಾಪುರ ಗ್ರಾಮದಲ್ಲಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.