ADVERTISEMENT

‘ಟಿಪ್ಪು ಜಯಂತಿ ಆಚರಿಸುವವರ ಗಲ್ಲಿಗೇರಿಸಿ’

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2017, 19:30 IST
Last Updated 23 ಅಕ್ಟೋಬರ್ 2017, 19:30 IST
ಪ್ರತಾಪ್ ಸಿಂಹ ಹಾಗೂ ಗೋಪಾಲ್‌ ಚರ್ಚಿಸಿದರು. ಡಿ.ಎಸ್. ವೀರಯ್ಯ, ಅದ್ದಂಡ ಕಾರ್ಯಪ್ಪ ಇದ್ದಾರೆ –ಪ್ರಜಾವಾಣಿ ಚಿತ್ರ
ಪ್ರತಾಪ್ ಸಿಂಹ ಹಾಗೂ ಗೋಪಾಲ್‌ ಚರ್ಚಿಸಿದರು. ಡಿ.ಎಸ್. ವೀರಯ್ಯ, ಅದ್ದಂಡ ಕಾರ್ಯಪ್ಪ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ವಿವಾದಿತ ವ್ಯಕ್ತಿಯಾದ ಟಿಪ್ಪುವಿನ ಜಯಂತಿ ಆಚರಣೆ ಮಾಡಲು ರಾಜ್ಯ ಸರ್ಕಾರ ಹೊರಟಿರುವುದು ಅಪರಾಧ. ಇಂತಹ ಜಯಂತಿ ಆಚರಿಸುವವರನ್ನು ಗಲ್ಲಿಗೇರಿಸಬೇಕು’ ಎಂದು ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಅದ್ದಂಡ ಕಾರ್ಯಪ್ಪ ಕಿಡಿಕಾರಿದರು.

ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿಯ ವತಿಯಿಂದ ನಗರ ದಲ್ಲಿ ಸೋಮವಾರ ಆಯೋಜಿ ಸಿದ್ದ ‘ರಾಜ್ಯಮಟ್ಟದ ಸಮಾವೇಶ’ದಲ್ಲಿ ಅವರು ಮಾತನಾಡಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶನಿ ಹಿಡಿದಿದೆ. ಅವರ ಕಾರಿನ ಮೇಲೆ ಕಾಗೆ ಕೂತಿತ್ತು. ಸ್ವತಃ ಏನೇನೋ ಆಗಿದೆ. ಇದು ಅವರಿಗೆ ಕೊನೆಯ ಜಯಂತಿ ಆಗಲಿದೆ. ಬರುವ ವರ್ಷ ಅವರು ಇರುವುದೇ ಇಲ್ಲ’ ಎಂದು ಅವರು ವ್ಯಂಗ್ಯವಾಡಿದರು.

ADVERTISEMENT

‘ಕೊಡವರ ಮನೆಗಳ ನಾಯಿಗಳಿಗೆ ಟಿಪ್ಪುವಿನ ಹೆಸರು ಇಡಲಾಗಿದೆ. ಮುಸ್ಲಿಮರು ನಾಯಿಗಳನ್ನು ಮುಟ್ಟು ವುದಿಲ್ಲ. ನಾಯಿ ಕಂಡರೆ ಅವರಿಗೆ ಆಗುವುದಿಲ್ಲ. ಹೀಗಾಗಿ ಟಿಪ್ಪುವಿಗೆ ಅಪಮಾನ ಮಾಡುವ ಉದ್ದೇಶದಿಂದ ನಾಯಿಗಳಿಗೆ ಈ ಹೆಸರು ಇಟ್ಟಿದ್ದೇವೆ’ ಎಂದು ತಿಳಿಸಿದರು.

ನಾಳೆಯಿಂದ ಒನಕೆ ಪ್ರತಿಭಟನೆ: ‘ಟಿಪ್ಪು ಜಯಂತಿಯನ್ನು ವಿರೋಧಿಸಿ ಇದೇ 25ರಿಂದ ನ.10ರವರೆಗೆ ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ಒನಕೆ ಪ್ರತಿಭಟನೆ, ಕಪ್ಪು ಬಾವುಟ ಪ್ರದರ್ಶನ ಹಾಗೂ ಪಂಜಿನ ಮೆರವಣಿಗೆ ಮಾಡುತ್ತೇವೆ’ ಎಂದರು.

ವಿಶ್ವ ಹಿಂದೂ ಪರಿಷತ್ತಿನ ದಕ್ಷಿಣ ಪ್ರಾಂತ ಕ್ಷೇತ್ರ ಸಂಘಟನಾ ಕಾರ್ಯ ದರ್ಶಿ ಗೋಪಾಲ್‌, ‘ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ‘ಸಿಮಿ’ಯ ರೂಪಾಂತರ ವೇದಿಕೆಯಾದ ಎಸ್‌ಡಿಪಿಐ, ಪಿಎಫ್‌ಐ ಅನ್ನು ಓಲೈಸಲು ಟಿಪ್ಪು ಜಯಂತಿ ಆಚರಿಸಲಾಗುತ್ತಿದೆ’ ಎಂದು ಆರೋಪಿಸಿದರು.

ಸಂಸದ ಪ್ರತಾಪ್‌ ಸಿಂಹ ಮಾತನಾಡಿ, ‘ದಿ ಸ್ವೋರ್ಡ್ ಆಫ್ ಟಿಪ್ಪು ಸುಲ್ತಾನ್‌ ಕಾದಂಬರಿಯನ್ನು ಆಧರಿಸಿ ಸಂಜಯ್‌ ಖಾನ್‌ ಧಾರಾವಾಹಿ ನಿರ್ಮಿ ಸಿದ್ದರು. ಅವರ ಸೆಟ್‌ಗೆ ಬೆಂಕಿ ಬಿದ್ದು ಚಿತ್ರ ಸಾಮ್ರಾಜ್ಯವೇ ನಾಶವಾಗಿತ್ತು.
ಉದ್ಯಮಿ ವಿಜಯ್‌ ಮಲ್ಯ ಟಿಪ್ಪುವಿನ ಖಡ್ಗ ಖರೀದಿಸಿದ್ದರು. ಬಳಿಕ ಅವರ ವ್ಯವಹಾರವೇ ಬಿದ್ದು ಹೋಯಿತು. ಸಿದ್ದರಾಮಯ್ಯ ಅವರು ಟಿಪ್ಪು ಜಯಂತಿ ಆಚರಿಸುತ್ತಿದ್ದು, ಆರು ತಿಂಗಳಲ್ಲಿ ಅವರ ರಾಜಕೀಯ ಸಾಮ್ರಾಜ್ಯ ‍ಪತನ ಹೊಂದಲಿದೆ’ ಎಂದು ವಾಗ್ದಾಳಿ ನಡೆಸಿದರು.

‌ಬಿಜೆಪಿ ಎಸ್‌ಸಿ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಡಿ.ಎಸ್‌.ವೀರಯ್ಯ, ‘ಮಲ ಹೊರುವ ಪದ್ಧತಿಯನ್ನು ಜಾರಿ ಗೊಳಿಸಿದ್ದೇ ಟಿಪ್ಪು. ಬಹುಪತ್ನಿಯರ ಮಲವನ್ನು ಎತ್ತಲು ಆತ ಕೈದಿಗಳನ್ನು ಬಳಕೆ ಮಾಡಿ ಕೊಂಡಿದ್ದ. ಅದು ಅಸ್ಪೃಶ್ಯತೆಯಾಗಿ ಬೆಳೆಯಿತು’ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.