ADVERTISEMENT

ತಜ್ಞ ವೈದ್ಯರ ನೇಮಕಕ್ಕೆ ಆನ್‌ಲೈನ್‌ ಬಿಡ್‌, ಸರ್ಕಾರದ ವಿನೂತನ ಕಾರ್ಯಕ್ರಮ: ಸಚಿವ ರಮೇಶ್‌ ಕುಮಾರ್‌

₹1.25ಲಕ್ಷ ಸಂಬಳ ಕೊಟ್ಟರೂ ಸೇವೆಗೆ ಸಿಗದ ವೈದ್ಯರು!

​ಪ್ರಜಾವಾಣಿ ವಾರ್ತೆ
Published 3 ಜುಲೈ 2017, 9:29 IST
Last Updated 3 ಜುಲೈ 2017, 9:29 IST
ತಜ್ಞ ವೈದ್ಯರ ನೇಮಕಕ್ಕೆ ಆನ್‌ಲೈನ್‌ ಬಿಡ್‌, ಸರ್ಕಾರದ ವಿನೂತನ ಕಾರ್ಯಕ್ರಮ: ಸಚಿವ ರಮೇಶ್‌ ಕುಮಾರ್‌
ತಜ್ಞ ವೈದ್ಯರ ನೇಮಕಕ್ಕೆ ಆನ್‌ಲೈನ್‌ ಬಿಡ್‌, ಸರ್ಕಾರದ ವಿನೂತನ ಕಾರ್ಯಕ್ರಮ: ಸಚಿವ ರಮೇಶ್‌ ಕುಮಾರ್‌   

ಬೆಂಗಳೂರು: ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ತಜ್ಞ ವೈದ್ಯರ ಕೊರತೆ ನೀಗಿಸುವ ನಿಟ್ಟಿನಲ್ಲಿ ಸರ್ಕಾರ ವಿನೂತನ ಕಾರ್ಯಕ್ರಮಕ್ಕೆ ಮುಂದಾಗಿದ್ದು, ಆನ್‌ಲೈನ್‌ ಬಿಡ್‌ ನಡೆಸಲು ಸಿದ್ಧತೆ ನಡೆಸಿದೆ.

‘₹1.25ಲಕ್ಷ ಸಂಬಳ ಕೊಟ್ಟರೂ ತಜ್ಞ ವೈದ್ಯರು ಸೇವೆಗೆ ಬರಲಿಲ್ಲ. ಹಾಗಾಗಿ ಆನ್ ಲೈನ್ ಬಿಡ್ ಮೂಲಕ ತಜ್ಞ ವೈದ್ಯರನ್ನು ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಿಗೆ  ನೇಮಕ ಮಾಡಲಾಗುತ್ತದೆ. ನಾಳೆಯಿಂದಲೇ ಸರ್ಕಾರ ಬಿಡ್ ಕರೆಯಲು ಸಿದ್ಧತೆ ನಡೆದಿದೆ’ ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ರಾಜ್ಯದಲ್ಲಿ 6500 ಎಂಡೋಸಲ್ಫಾನ್ ಸಂತ್ರಸ್ತರು:
ರಾಜ್ಯದಲ್ಲಿ 6500 ಎಂಡೋಸಲ್ಫಾನ್ ಸಂತ್ರಸ್ತರಿದ್ದು, ಪರಿಹಾರ ಒದಗಿಸಲು ಸರ್ಕಾರಕ್ಕೆ ಇದರಿಂದ ₹100 ಕೋಟಿ ರೂ. ಹೊರೆಯಾಗಲಿದೆ. ಹಂತ ಹಂತವಾಗಿ ಈ ಸಮಸ್ಯೆ ಬಗೆಹರಿಸಿ, ಪರಿಹಾರ ನೀಡಲಾಗುವುದು. ಈ ಬಗ್ಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲಾಗಿದೆ ಎಂದರು.

ADVERTISEMENT

ಕರಾವಳಿ ಭಾಗದಲ್ಲಿ ಎಂಡೋಸಲ್ಫಾನ್ ಸಂತ್ರಸ್ತರಿಗೆ ಕೇರಳ ಮಾದರಿಯಲ್ಲಿ ಪರಿಹಾರ ನೀಡಲು ಒತ್ತಾಯ ಬಂದಿತ್ತು. ಅಲ್ಲಿನಂತೆ ರಾಜ್ಯಮಟ್ಟದ ಸಮಿತಿ ರಚಿಸುವ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುತ್ತದೆ ಎಂದು ಸಚಿವ ರಮೇಶ್ ಕುಮಾರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.