ADVERTISEMENT

ತವರು ಜಿಲ್ಲೆ ಮೇಲೆ ಮುಖ್ಯಮಂತ್ರಿ ಪ್ರೇಮ!

​ಪ್ರಜಾವಾಣಿ ವಾರ್ತೆ
Published 12 ಜುಲೈ 2013, 19:59 IST
Last Updated 12 ಜುಲೈ 2013, 19:59 IST

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿಗೆ ಈ ಸಲದ ಬಜೆಟ್‌ನಲ್ಲಿ ಭರಪೂರ ಕೊಡುಗೆಗಳು ಘೋಷಣೆ ಮಾಡಿದ್ದಾರೆ.

ಮೈಸೂರು ನಗರದ ಕೆಲವು ಕಡೆ ಮಾತ್ರ ದಿನದ 2* ಗಂಟೆ ನೀರು ಸರಬರಾಜು ವ್ಯವಸ್ಥೆ ಇದ್ದು, ಅದನ್ನು ಇಡೀ ನಗರಕ್ಕೆ ವಿಸ್ತರಿಸುವ ತೀರ್ಮಾನ ಕೂಡ ಪ್ರಕಟಿಸಲಾಗಿದೆ.

ಇತರ ಕೊಡುಗೆ...
*ಮೈಸೂರು ನಗರದ ಮೂಲಸೌಕರ್ಯ ಅಭಿವೃದ್ಧಿಗೆ  ರೂ 100 ಕೋಟಿ
*ಹಾಲಿನ ಪುಡಿ ಉತ್ಪಾದಿಸುವ ಮೆಗಾ ಡೇರಿ ಮೈಸೂರು ನಗರದಲ್ಲಿ ಆರಂಭ
*ಮೈಸೂರು ಜಿಲ್ಲೆಯ ಕರ್ನಾಟಕ ರೇಷ್ಮೆ ಕೈಗಾರಿಕಾ ನಿಗಮದ ಹಳೆ ಘಟಕಗಳನ್ನು ಆಧುನೀಕರಣಗೊಳಿಸಲು  ರೂ 5 ಕೋಟಿ                                                                                                                                                                                                                                                                                                                                                                                                                                                                                                                                                                                                                                                                                                                                                                                                                                         
*ಮೈಸೂರು, ರಾಯಚೂರಿನಲ್ಲಿ ವೈಜ್ಞಾನಿಕ ವರ್ಗೀಕರಣ ಕೇಂದ್ರ ಸ್ಥಾಪನೆ. ಇದಕ್ಕೆ  ರೂ 3.5 ಕೋಟಿ ಮೀಸಲು
*ಮೈಸೂರು ವಿಶ್ವವಿದ್ಯಾಲಯದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಸಾಮಾಜಿಕ ಅಭಿವೃದ್ಧಿ ಅಧ್ಯಯನ ಪೀಠ ಸ್ಥಾಪನೆ
*ಮೈಸೂರಿನ ಪ್ರಾದೇಶಿಕ ಆಹಾರ ಪ್ರಯೋಗಾಲಯ ಮೇಲ್ದರ್ಜೆಗೆ
*ಮೈಸೂರು ವೈದ್ಯಕೀಯ ಕಾಲೇಜಿನಲ್ಲಿ ಅಪಘಾತ ತುರ್ತು ಚಿಕಿತ್ಸಾ ಕೇಂದ್ರ
*ಜೆನರ್ಮ್ ಯೋಜನೆಯಡಿ ಬೆಂಗಳೂರು, ಮೈಸೂರು ನಗರಗಳಲ್ಲಿ 39 ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು. ಇದಕ್ಕೆ  ರೂ *150 ಕೋಟಿ ಮೀಸಲು
*ಮೈಸೂರಿನಲ್ಲಿ ಬಹುಕೌಶಲ ಅಭಿವೃದ್ಧಿ ಕೇಂದ್ರ ಸ್ಥಾಪನೆ
*ನಗರ ಪ್ರದೇಶಗಳಲ್ಲಿ ಬಡವರಿಗೆ ಮೂಲಸೌಲಭ್ಯ ಕಲ್ಪಿಸಲು  ರೂ 842 ಕೋಟಿ ವೆಚ್ಚದಲ್ಲಿ 18 ಯೋಜನೆಗಳನ್ನು ಕೈಗೆತ್ತಿಕೊಂಡಿದ್ದು, ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು.
*ಸುತ್ತೂರಿನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಜ್ಞಾನ ಸಂಪನ್ಮೂಲ ಕೇಂದ್ರ ಸ್ಥಾಪಿಸಲು  ರೂ 5 ಕೋಟಿ
*ಬೆಂಗಳೂರು, ಮೈಸೂರು, ಮಂಗಳೂರು, ಬೆಳಗಾವಿ ಮತ್ತು ಹುಬ್ಬಳ್ಳಿ- ಧಾರವಾಡ ನಗರಗಳನ್ನು ಸುರಕ್ಷಿತ ನಗರಗಳನ್ನಾಗಿ ಪರಿವರ್ತಿಸಲು ತೀರ್ಮಾನ. ಮೂಲಸೌಕರ್ಯಕ್ಕಾಗಿ ಐದು ವರ್ಷಗಳಲ್ಲಿ  ರೂ 150 ಕೋಟಿ ವಿನಿಯೋಗ
*ಪೊಲೀಸ್ ಸಿಬ್ಬಂದಿಯ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಮೈಸೂರು ಪೊಲೀಸ್ ಶಾಲೆ ಮೇಲ್ದರ್ಜೆಗೆ
*ಮೈಸೂರಿನ ಪೊಲೀಸ್ ಸಾರ್ವಜನಿಕ ಶಾಲೆಯನ್ನು ಸೈನಿಕ ಶಾಲೆ ಅಥವಾ ಇತರ ಮಾದರಿ ಸಾರ್ವಜನಿಕ ಶಾಲೆಗಳ ಹಾಗೆ ಮೇಲ್ದರ್ಜೆಗೆ
*ಮೈಸೂರು ನಗರ ಸಶಸ್ತ್ರ ಮೀಸಲು ಪಡೆ ಮೇಲ್ದರ್ಜೆಗೆ
*ಮೈಸೂರಿನ ವಕೀಲರ ಸಂಘದ ಭವನ ನಿರ್ಮಾಣಕ್ಕೆ  ರೂ 2 ಕೋಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.