ADVERTISEMENT

ತೆಲಂಗಾಣ-ಛತ್ತಿಸಗಡ ಗಡಿಯಲ್ಲಿ ನಕ್ಸಲ್‌ ದಾಳಿಗೆ ಬೀದರ್‌ ಯೋಧನ ಶವಯಾತ್ರೆ ಆರಂಭ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2018, 9:07 IST
Last Updated 3 ಮಾರ್ಚ್ 2018, 9:07 IST
ತೆಲಂಗಾಣ-ಛತ್ತಿಸಗಡ ಗಡಿಯಲ್ಲಿ ನಕ್ಸಲ್‌ ದಾಳಿಗೆ ಬೀದರ್‌ ಯೋಧನ ಶವಯಾತ್ರೆ ಆರಂಭ
ತೆಲಂಗಾಣ-ಛತ್ತಿಸಗಡ ಗಡಿಯಲ್ಲಿ ನಕ್ಸಲ್‌ ದಾಳಿಗೆ ಬೀದರ್‌ ಯೋಧನ ಶವಯಾತ್ರೆ ಆರಂಭ   

ಬೀದರ್‌: ತೆಲಂಗಾಣ-ಛತ್ತೀಸಗಡ ಗಡಿಯಲ್ಲಿ ನಕ್ಸಲರ ವಿರುದ್ಧ ಗುರುವಾರ ನಡೆದ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಯೋಧ ಸುಶೀಲಕುಮಾರ ವಿಲ್ಸನ್ ಅವರ ಶವಯಾತ್ರೆ ಇಲ್ಲಿ ನಡೆಯಿತು.

ಬೀದರ್‌ನ ಲಾಡಗೇರಿ ಗ್ರೇಸ್‌ಕಾಲೊನಿಯ ನಿವಾಸಿಯಾದ ಯೋಧ ಸುಶೀಲಕುಮಾರ ಅವರು ತೆಲಂಗಾಣ ನಕ್ಸಲ್ ನಿಗ್ರಹ ಪಡೆ ಕಮಾಂಡೊ ಆಗಿ ಕಾರ್ಯನಿರ್ವಹಿಸಿದ್ದರು.

ಪಾರ್ಥೀವ ಶರೀರವನ್ನು ಮೆರವಣಿಗೆ ಮೂಲಕ ಮಂಗಲಪೇಟ್ ಸ್ಮಶಾನಕ್ಕೆ ತರಲಾಗಿದೆ. ಈ ವೇಳೆ ತೆಲಂಗಾಣ ಪೊಲೀಸ್ ಅಧಿಕಾರಿಗಳು ಇದ್ದಾರೆ. ಈ ವೇಳೆ ನೂರಾರು ಜನರು ಶವಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. 

ADVERTISEMENT

ಇದನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.