ADVERTISEMENT

ಥಳಿತಕ್ಕೆ ಒಳಗಾದ ಕರಡಿ ಸಾವು

​ಪ್ರಜಾವಾಣಿ ವಾರ್ತೆ
Published 14 ಜನವರಿ 2016, 19:30 IST
Last Updated 14 ಜನವರಿ 2016, 19:30 IST
ಅರಣ್ಯ ಇಲಾಖೆ ಸಿಬ್ಬಂದಿ ಗುರುವಾರ ಸಾವನ್ನಪ್ಪಿದ ಕರಡಿಯ ಅಂತ್ಯಸಂಸ್ಕಾರ ಮಾಡಿದರು.
ಅರಣ್ಯ ಇಲಾಖೆ ಸಿಬ್ಬಂದಿ ಗುರುವಾರ ಸಾವನ್ನಪ್ಪಿದ ಕರಡಿಯ ಅಂತ್ಯಸಂಸ್ಕಾರ ಮಾಡಿದರು.   

ಚಿತ್ರದುರ್ಗ: ತಾಲ್ಲೂಕಿನ ಜಾನಕೊಂಡ ಸಮೀಪದ ಉಪ್ಪನಾಯಕನಹಳ್ಳಿಯಲ್ಲಿ ಗ್ರಾಮಸ್ಥರ ಥಳಿತದಿಂದ ಅಸ್ವಸ್ಥಗೊಂಡು ಆಡುಮಲ್ಲೇಶ್ವ­ರ ಕಿರುಮೃಗಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕರಡಿ ಗುರುವಾರ ಮುಂಜಾನೆ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದೆ.

ಮಂಗಳವಾರ ಕರಡಿ ಗ್ರಾಮದಲ್ಲಿ ರೈತರ ಮೇಲೆ ದಾಳಿ ನಡೆಸಿತ್ತು. ರೊಚ್ಚಿಗೆದ್ದ ಗ್ರಾಮಸ್ಥರು, ಬುಧವಾರ ಕರಡಿ ಮತ್ತಿಬ್ಬರ ಮೇಲೆ ಎರಗಿದಾಗ ಹಿಗ್ಗಾಮುಗ್ಗಾ ಥಳಿಸಿದ್ದರು.

ಬುಧವಾರ ಸಂಜೆ ಜೋಗಿಮಟ್ಟಿಯ ಆಡುಮಲ್ಲೇಶ್ವರ ಕಿರುಮೃಗಾಲಯಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಕರಡಿಯನ್ನು ಕರೆತಂದಾಗಲೇ ಅದು ತೀವ್ರ ಅಸ್ವಸ್ಥವಾಗಿತ್ತು. ಏನೇ ಔಷಧಿ ನೀಡಿದರೂ ಸ್ಪಂದಿಸುತ್ತಿರಲಿಲ್ಲ. ಗುರುವಾರ ಬೆಳಗಿನ ಜಾವ ಮೃತಪಟ್ಟಿದೆ ಎಂದು ಚಿಕಿತ್ಸೆ ನೀಡಿದ ಪಶುವೈದ್ಯ ಡಾ.ಪ್ರಸನ್ನಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಅರಣ್ಯ ಸಿಬ್ಬಂದಿ ಪ್ರದೀಪ್, ಫಾರೆಸ್ಟ್‌ ಗಾರ್ಡ್‌ಗಳು, ಕಿರುಮೃಗಾಲಯದ ಉಸ್ತುವಾರಿಗಳ ಸಮ್ಮುಖದಲ್ಲಿ ಡಾ. ಪ್ರಸನ್ನ ಮರಣೋತ್ತರ ಪರೀಕ್ಷೆ ನಡೆಸಿದರು. ಕಿರು ಮೃಗಾಲಯದ ಹಿಂಭಾ ಗದಲ್ಲಿ ಅಂತ್ಯಕ್ರಿಯೆ ನಡೆಸಲಾಗಿದೆ.

ಕರಡಿಯ ಮರಣೋತ್ತರ ಪರೀಕ್ಷೆ ವೇಳೆ ಹಿರಿಯ ಅಧಿಕಾರಿಗಳು ಗೈರಾಗಿದ್ದರು. ವಲಯ ಅರಣ್ಯ ಅಧಿಕಾರಿ ಸೇರಿದಂತೆ ಇಲಾಖೆಯ ಯಾವ ಹಿರಿಯ ಸಿಬ್ಬಂದಿಯೂ ಇರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.