ADVERTISEMENT

ದುಷ್ಕೃತ್ಯಕ್ಕೆ ಅಡಿಕೆ ತೋಟ ನಾಶ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2013, 20:00 IST
Last Updated 18 ಡಿಸೆಂಬರ್ 2013, 20:00 IST
ಭರಮಸಾಗರ ಹೋಬಳಿ ಕಡ್ಲೆಗುದ್ದು ಗ್ರಾಮದಲ್ಲಿ ಮಂಗಳವಾರ ರಾತ್ರಿ ದುಷ್ಕರ್ಮಿಗಳ ಕೃತ್ಯದಿಂದ ಹನುಮಂತಯ್ಯ ಎಂಬುವರಿಗೆ ಸೇರಿದ ಎರಡು ಎಕರೆ ಅಡಿಕೆ ತೋಟ ನಾಶವಾಗಿದೆ.
ಭರಮಸಾಗರ ಹೋಬಳಿ ಕಡ್ಲೆಗುದ್ದು ಗ್ರಾಮದಲ್ಲಿ ಮಂಗಳವಾರ ರಾತ್ರಿ ದುಷ್ಕರ್ಮಿಗಳ ಕೃತ್ಯದಿಂದ ಹನುಮಂತಯ್ಯ ಎಂಬುವರಿಗೆ ಸೇರಿದ ಎರಡು ಎಕರೆ ಅಡಿಕೆ ತೋಟ ನಾಶವಾಗಿದೆ.   

ಭರಮಸಾಗರ: ಎರಡು ಎಕರೆ ಪ್ರದೇಶದಲ್ಲಿ ಬೆಳೆಸಿದ್ದ ಸುಮಾರು 1200 ಅಡಿಕೆ ಗಿಡಗಳನ್ನು ದುಷ್ಕರ್ಮಿಗಳು ನಿರ್ದಯವಾಗಿ ಕಡಿದುಹಾಕಿದ ಘಟನೆ ಹೋಬಳಿಯ ಕಡ್ಲೆಗುದ್ದು ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ಗ್ರಾಮದ ಆಂಜನೇಯ ದೇವಸ್ಥಾನದ ಪೂಜಾರಿ ವೈಷ್ಣವ ಜನಾಂಗದ ಆರ್‌. ಹನುಮಂತಯ್ಯ ತಮ್ಮ 4 ಎಕರೆ 17ಗುಂಟೆ ಪ್ರದೇಶದಲ್ಲಿ ಅಡಿಕೆ ಗಿಡಗಳನ್ನು ಬೆಳೆಸಿದ್ದಾರೆ. ಅದರಲ್ಲಿ ಸಣ್ಣಗಿಡಗಳನ್ನು ಬಿಟ್ಟು ಎರಡು ಎಕರೆ ಪ್ರದೇಶದಲ್ಲಿದ್ದ ನಾಲ್ಕು ವರ್ಷದ 1200 ಅಡಿಕೆ ಗಿಡಗಳನ್ನು ದುಷ್ಕರ್ಮಿಗಳು ಮಂಗಳವಾರ ರಾತ್ರಿ ಕಡಿದು ಹಾಕಿದ್ದು ಸುಮಾರು ₨ 4 ಲಕ್ಷ ನಷ್ಟವಾಗಿದೆ.

ಇನ್ನೆರಡು ವರ್ಷ ಕಳೆದಿದ್ದರೆ ಅಡಿಕೆ ಫಸಲು ಆರಂಭವಾಗಲಿದ್ದು ಉತ್ತಮ ಆದಾಯದ ನಿರೀಕ್ಷೆ ಇರಿಸಿಕೊಂಡಿದ್ದ ಕುಟುಂಬ ಘಟನೆಯಿಂದ ನೊಂದಿದೆ.

ಹನುಮಂತಯ್ಯ ಭರಮಸಾಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.