ADVERTISEMENT

ದೇವೇಗೌಡರಿಗೆ ಅಗೌರವ ತೋರಿದರೆ ಠೇವಣಿ ಬರಲ್ಲ: ಜಿಟಿಡಿ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2018, 19:30 IST
Last Updated 26 ಮಾರ್ಚ್ 2018, 19:30 IST
ದೇವೇಗೌಡರಿಗೆ ಅಗೌರವ  ತೋರಿದರೆ ಠೇವಣಿ ಬರಲ್ಲ: ಜಿಟಿಡಿ
ದೇವೇಗೌಡರಿಗೆ ಅಗೌರವ ತೋರಿದರೆ ಠೇವಣಿ ಬರಲ್ಲ: ಜಿಟಿಡಿ   

ಮೈಸೂರು: ‘ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ವಿರುದ್ಧ ಹಗುರವಾಗಿ ಮಾತನಾಡಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂಬರುವ ಚುನಾವಣೆಯಲ್ಲಿ ಠೇವಣಿ ಕಳೆದುಕೊಳ್ಳಲಿದ್ದಾರೆ’ ಎಂದು ಶಾಸಕ ಜಿ.ಟಿ.ದೇವೇಗೌಡ ಇಲ್ಲಿ ಸೋಮವಾರ ಎಚ್ಚರಿಕೆ ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ‘ಕುರಿ ಲೆಕ್ಕ ಹಾಕಲೂ ಗೊತ್ತಿಲ್ಲದವರನ್ನು ದೇವೇಗೌಡರು ಹಣಕಾಸು ಸಚಿವರನ್ನಾಗಿ ಮಾಡಿದರು. ದನ ಮೇಯಿಸುತ್ತಿದ್ದವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಿದರು ಎಂದು ಆಗ ಜನ ಮಾತನಾಡಿಕೊಂಡಿದ್ದರು. ಪಿ.ಜಿ.ಆರ್‌.ಸಿಂಧ್ಯ, ಎಂ.ಪಿ. ಪ್ರಕಾಶ್‌, ಸಿ.ಬೈರೇಗೌಡ ಅಂತಹವರನ್ನು ಬಿಟ್ಟು ಸಿದ್ದರಾಮಯ್ಯಗೆ ಅವಕಾಶ ನೀಡಿದ್ದರು’ ಎಂದರು.

‘ತಮ್ಮನ್ನು ರಾಜಕೀಯವಾಗಿ ಬೆಳೆಸಿದವರನ್ನು ಮರೆತು ಈಗ ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಅಗೌರವ ತೋರುತ್ತಿದ್ದಾರೆ. ಎಷ್ಟೋ ಮುಖ್ಯಮಂತ್ರಿಗಳು ಠೇವಣಿ ಕಳೆದುಕೊಂಡ ಉದಾಹರಣೆ ಇದೆ. ನಾಳೆ ಸಿದ್ದರಾಮಯ್ಯ ಅವರಿಗೂ ಅದೇ ಗತಿ ಬರಬಹುದು’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.