ಧಾರವಾಡ: ಇಲ್ಲಿನ ಹಳಿಯಾಳ ಮಾರ್ಗ ಮಧ್ಯೆ ಮುರಕಟ್ಟಿ ಕ್ರಾಸ್ ಬಳಿ ಭಾನುವಾರ ಬೆಳಿಗ್ಗೆ ಟವೇರಾ ಕಾರ್‌ಗೆ ಸರ್ಕಾರಿ ಬಸ್ಸೊಂದು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಮೃತಪಟ್ಟಿದ್ದಾರೆ.
ಧಾರವಾಡದಿಂದ ಹಳಿಯಾಳಕ್ಕೆ ಹೊರಟಿದ್ದ ಟವೇರಾದಲ್ಲಿದ್ದ ನಾಲ್ವರು ಮೃತಪಟ್ಟಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತಪಟ್ಟವರನ್ನು ಧಾರವಾಡದ ಕಂಠಿ ಓಣಿ ನಿವಾಸಿಗಳಾದ ಇಮ್ರಾನ್ ಮಕಾನ್‌ದಾರ, ಆಫ್ರೀನ್ ಮಕಾನ್‌ದಾರ ಹಾಗೂ ಇವರ ಮಗಳು ಅಲ್ಸಿಯಾ ಎಂದು ಗುರುತಿಸಲಾಗಿದೆ. ಚಾಲಕ ಕೂಡ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಘಟನಾ ಸ್ಥಳಕ್ಕೆ ಧಾವಿಸಿದ ಅಳ್ನಾವರ ಪೊಲೀಸರು ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿದ್ದಾರೆ. ಅಳ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.