ADVERTISEMENT

ನಮಗೆ ಏನೇನು..?

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2013, 19:59 IST
Last Updated 26 ಫೆಬ್ರುವರಿ 2013, 19:59 IST
ನಮಗೆ ಏನೇನು..?
ನಮಗೆ ಏನೇನು..?   

ಹೊಸ ರೈಲು ಮಾರ್ಗಗಳು
* ಚಿಕ್ಕಬಳ್ಳಾಪುರ-ಗೌರಿಬಿದನೂರು
* ಚಿಕ್ಕಬಳ್ಳಾಪುರ-ಪುಟ್ಟಪರ್ತಿ
* ಗದಗ-ವಾಡಿ
* ಶ್ರೀನಿವಾಸಪುರ-ಮದನಪಲ್ಲಿ

ಸರ್ವೇ ಕಾರ್ಯ
* ತುಮಕೂರು-ಮದ್ದೂರು-ಮಳವಳ್ಳಿ
* ವಿಜಾಪುರ-ಮಂಗಳವೇಡೆ-ಪಂಡರಪುರ

ಜೋಡಿ ಮಾರ್ಗ
* ತುಮಕೂರು-ಅರಸೀಕೆರೆ
* ಮಂಗಳೂರು- ಶೋರನೂರು(3ನೇ ಮಾರ್ಗ)

ಹೊಸ ರೈಲು ಸೇವೆಗಳು
* ಬೆಂಗಳೂರು - ಮಂಗಳೂರುಎಕ್ಸ್‌ಪ್ರೆಸ್ (ವಾರಕ್ಕೊಮ್ಮೆ)
* ಹುಬ್ಬಳ್ಳಿ- ಮುಂಬೈ ಎಕ್ಸ್‌ಪ್ರೆಸ್ (ವಾರಕ್ಕೊಮ್ಮೆ)
* ಮಡಗಾಂವ್- ಮಂಗಳೂರು ಇಂಟರ್‌ಸಿಟಿ ಎಕ್ಸ್‌ಪ್ರೆಸ್ (ಪ್ರತಿ ದಿನ)
* ಮಂಗಳೂರು- ಕಾಚಿಗುಡ ಎಕ್ಸ್‌ಪ್ರೆಸ್ (ಕೊಯಮತ್ತೂರು, ಗುತ್ತಿ, ರೇಣಿಗುಂಟ ಮಾರ್ಗ- ವಾರಕ್ಕೊಮ್ಮೆ)
* ನಾಗರಕೊಯಿಲ್- ಬೆಂಗಳೂರುಎಕ್ಸ್‌ಪ್ರೆಸ್ (ಪ್ರತಿ ದಿನ)
* ಪಟ್ನಾ- ಬೆಂಗಳೂರು ಎಕ್ಸ್‌ಪ್ರೆಸ್ (ಚೆವೋಕಿ ಮಾರ್ಗವಾಗಿ- ವಾರಕ್ಕೊಮ್ಮೆ)
* ಯಶವಂತಪುರ- ಲಖನೌ ಎಕ್ಸ್‌ಪ್ರೆಸ್ (ರಾಯಬರೇಲಿ ಮಾರ್ಗವಾಗಿ- ವಾರಕ್ಕೊಮ್ಮೆ)
* ಕಾಮಾಕ್ಯ (ಗುವಾಹಟಿ)- ಬೆಂಗಳೂರು ಎ ಸಿ ಎಕ್ಸ್‌ಪ್ರೆಸ್ (ವಾರಕ್ಕೊಮ್ಮೆ)

ಪ್ಯಾಸೆಂಜರ್ ರೈಲುಗಳು (ನಿತ್ಯ)
* ಮಾರಿಕುಪ್ಪಂ- ಬೆಂಗಳೂರು
* ತಾಳಗುಪ್ಪ-ಶಿವಮೊಗ್ಗ

ಡೀಸೆಲ್- ವಿದ್ಯುತ್ ಚಾಲಿತ ರೈಲು (ಡಿಇಎಂಯು)
* ಭಟ್ಕಳ- ತೋಕೂರು (ಸುರತ್ಕಲ್ ಸಮೀಪ)
* ಮಡಗಾಂವ್- ಕಾರವಾರ

ರೈಲುಗಳ ವಿಸ್ತರಣೆ
* ಬಾಗಲಕೋಟೆ -ಯಶವಂತಪುರ ಎಕ್ಸ್‌ಪ್ರೆಸ್ (ಗುಲ್ಬರ್ಗ ಮಾರ್ಗ) ಮೈಸೂರು ವರೆಗೆ
* ಹುಬ್ಬಳ್ಳಿ- ಬೆಂಗಳೂರು ಹಂಪಿಎಕ್ಸ್‌ಪ್ರೆಸ್ (ಹೊಸಪೇಟೆ- ಬಳ್ಳಾರಿ ಮಾರ್ಗ) ಮೈಸೂರು ವರೆಗೆ
* ಮಂಗಳೂರು-ತಿರುಚಿನಾಪಳ್ಳಿಎಕ್ಸ್‌ಪ್ರೆಸ್ ಪುದುಚೇರಿ ವರೆಗೆ
* ಸೊಲ್ಲಾಪುರ-ಯಶವಂತಪುರಎಕ್ಸ್‌ಪ್ರೆಸ್ (ವಿಜಾಪುರ- ಹುಬ್ಬಳ್ಳಿ ಮಾರ್ಗ) ಮೈಸೂರು ವರೆಗೆ
* ಯಶವಂತಪುರ- ಹಜರತ್ ನಿಜಾಮುದ್ದೀನ್ ಸಂಪರ್ಕ ಕ್ರಾಂತಿ (ಹುಬ್ಬಳ್ಳಿ ಮಾರ್ಗ) ಚಂಡೀಗಡ ವರೆಗೆ
* ಬೆಂಗಳೂರು- ನಾಗೋರ್ ಪ್ಯಾಸೆಂಜರ್ ಕಾರೈಕಲ್ ವರೆಗೆ
* ಮೈಸೂರು-ಶಿವಮೊಗ್ಗ ಪ್ಯಾಸೆಂಜರ್ ತಾಳಗುಪ್ಪ ವರೆಗೆ
* ದರ್ಭಾಂಗ- ಬೆಂಗಳೂರು ಎಕ್ಸ್‌ಪ್ರೆಸ್ ಮೈಸೂರು ವರೆಗೆ

ಓಡಾಟ ಹೆಚ್ಚಳ
* ಯಶವಂತಪುರ- ಹಜರತ್ ನಿಜಾಮುದ್ದೀನ್ ಸಂಪರ್ಕ ಕ್ರಾಂತಿ (ವಾರಕ್ಕೆ ಎರಡು ದಿನದಿಂದ ನಾಲ್ಕು ದಿನಕ್ಕೆ)
* ಬೆಂಗಳೂರು- ತುಮಕೂರು ಪ್ಯಾಸೆಂಜರ್ (ಪ್ರತಿ ದಿನ) 

2013 ಮಾರ್ಚ್ ಅಂತ್ಯದೊಳಗೆ ಮುಗಿಯುವ ಯೋಜನೆಗಳು
ಹೊಸ ಮಾರ್ಗ

* ಗುಲ್ಬರ್ಗ- ಸುಲ್ತಾನಪುರ
* ಕಣಿವೆಹಳ್ಳಿ- ಚಿಕ್ಕಮಗಳೂರು
* ರಾಯಚೂರು-ಪಾಂಡುರಂಗಸ್ವಾಮಿ (ಭಾಗಶಃ)

ಜೋಡಿ ಮಾರ್ಗ
* ಚನ್ನಪಟ್ಟಣ-ಶೆಟ್ಟಿಹಳ್ಳಿ
* ಹನಕೆರೆ-ಮಂಡ್ಯ
* ಮಂಡ್ಯ-ಎಲಿಯೂರು

ವಿದ್ಯುದ್ದೀಕರಣ
* ರಾಮನಗರ-ಮದ್ದೂರು
* ಯಲಹಂಕ-ಸೋಮೇಶ್ವರ

2013-2014ರಲ್ಲಿ ಮುಗಿಯುವ ಯೋಜನೆಗಳು
ಹೊಸ ರೈಲು ಮಾರ್ಗ
* ಬಾಗಲಕೋಟೆ- ಕೆರಕಲಮಟ್ಟಿ

ಜೋಡಿ ಮಾರ್ಗಗಳು
* ಶೆಟ್ಟಿಹಳ್ಳಿ- ಮದ್ದೂರು
* ಶಿವನಿ- ಹೊಸದುರ್ಗ
* ಯಲಹಂಕ- ಚೆನ್ನಸಂದ್ರ

*ಮಂಗಳೂರಿನಲ್ಲಿ ರೈಲ್ವೆ ಕೌಶಲ ತರಬೇತಿ ಕೇಂದ್ರ ಸ್ಥಾಪನೆ
*ಬೆಂಗಳೂರು ರೈಲು ನಿಲ್ದಾಣದಲ್ಲಿ ಐಷಾರಾಮಿ ನಿರೀಕ್ಷಣಾ ಕೊಠಡಿ

ನಿರಾಶಾದಾಯಕ
ರಾಜ್ಯದ ಪಾಲಿಗೆ ನಿರಾಶಾದಾಯಕ. ಸರಕು ಸಾಗಣೆ ದರಗಳನ್ನು ಹೆಚ್ಚಿಸಿರುವುದರಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಲಿದೆ. ಇದರಿಂದ ಜನಸಾಮಾನ್ಯರ ಮೇಲೆ ಮತ್ತಷ್ಟು ಹೊರೆ ಬೀಳಲಿದೆ.  ರೈಲ್ವೆ ಯೋಜನೆಗಳಲ್ಲಿ ರಾಜ್ಯಕ್ಕೆ ಆದ್ಯತೆ ಸಿಕ್ಕಿಲ್ಲ. ರೈಲ್ವೆ ಯೋಜನೆಗಳಿಗೆ ರಾಜ್ಯ ಸರ್ಕಾರ ತನ್ನ ಪಾಲಿನ ಶೇ 50ರಷ್ಟು ಅನುದಾನ ನೀಡುತ್ತಿದೆ. ಅಲ್ಲದೆ ಅಗತ್ಯವಿರುವ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ರೈಲ್ವೆ ಇಲಾಖೆಗೆ ಹಸ್ತಾಂತರಿಸಲಾಗುತ್ತಿದೆ. ಆದರೂ ರಾಜ್ಯದ ಮನವಿಗೆ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ.
- ಜಗದೀಶ ಶೆಟ್ಟರ್, ಮುಖ್ಯಮಂತ್ರಿ

ರಾಜ್ಯಕ್ಕೆ ವರದಾನ
ನೆನೆಗುದಿಗೆ ಬಿದ್ದಿದ್ದ ರೈಲ್ವೆ ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ಜನಸಾಮಾನ್ಯರಿಗೆ ಹೊರೆಯಾಗದ ಹಾಗೆ ಮಂಡಿಸಿರುವ ರೈಲ್ವೆ ಬಜೆಟ್ ರಾಜ್ಯಕ್ಕೆ ವರದಾನವಾಗಿದೆ. ಹಿರಿಯ ನಾಗರಿಕರಿಗೆ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
ಮಂಗಳೂರಿನಲ್ಲಿ ಕೌಶಲ ಅಭಿವೃದ್ಧಿ ಕೇಂದ್ರ ಸ್ಥಾಪನೆ, ಬೆಂಗಳೂರು ರೈಲು ನಿಲ್ದಾಣವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಏರಿಸುವ ಘೋಷಣೆ ಜೊತೆಗೆ ರಾಜ್ಯಕ್ಕೆ ಹೊಸ ಮಾರ್ಗಗಳನ್ನು ಮಂಜೂರು ಮಾಡಲಾಗಿದೆ. ರೈಲುಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಮಹಿಳೆಯರ ಸುರಕ್ಷತೆಗಾಗಿ ಸಹಾಯವಾಣಿ, ಮೊಬೈಲ್ ಮೂಲಕ ಟಿಕೆಟ್ ಬುಕಿಂಗ್ ಸೌಲಭ್ಯ ಕಲ್ಪಿಸಿರುವುದು ಸ್ವಾಗತಾರ್ಹ.
-ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷರು

ADVERTISEMENT

ರಾಜ್ಯಕ್ಕೆ ಅನ್ಯಾಯ
ಪ್ರತಿವರ್ಷದಂತೆ ಈ ಬಾರಿಯೂ ರೈಲ್ವೆ ಬಜೆಟ್‌ನಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ. ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಹೆಚ್ಚಿನ ಕೊಡುಗೆ, ನೆರವು ನಿರೀಕ್ಷಿಸಲಾಗಿತ್ತು. ಆ ನಿರೀಕ್ಷೆ ಹುಸಿಯಾಗಿದೆ. ರೈಲ್ವೆ ಭೂಪಟದಲ್ಲಿ ರಾಜ್ಯಕ್ಕೆ ಸೂಕ್ತ ಸ್ಥಾನಮಾನ ದೊರೆತಿಲ್ಲ.
- ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.