ADVERTISEMENT

ನರ್ಸಿಂಗ್ ಹೋಂಗೆ ನಾಗರಿಕರ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2012, 18:35 IST
Last Updated 2 ಆಗಸ್ಟ್ 2012, 18:35 IST

ಪಾಂಡವಪುರ: ಪಟ್ಟಣದ ಬಾಬು ನರ್ಸಿಂಗ್‌ಹೋಂನಲ್ಲಿ ಬಾಣಂತಿಯೊಬ್ಬರಿಗೆ ನೀಡಿದ್ದ ಪೌಷ್ಟಿಕಾಂಶದ ಪೌಡರ್‌ನಲ್ಲಿ ಹುಳುಗಳಿವೆ ಎಂದು ಆರೋಪಿಸಿ ನಾಗರಿಕರು ನರ್ಸಿಂಗ್ ಹೋಂಗೆ ಮುತ್ತಿಗೆ ಹಾಕಿ ವೈದ್ಯರುಗಳನ್ನು ಗುರುವಾರ ತರಾಟೆಗೆ ತೆಗೆದುಕೊಂಡರು.

ಕೆಲವು ದಿನಗಳ ಹಿಂದೆ ಪಟ್ಟಣದ ನಿವಾಸಿ ರಾಘು ಎಂಬುವರ ಪತ್ನಿಗೆ ಪ್ರೋಟಿನ್ ಫುಡ್ ಡಿ-ಪ್ರೋವ್ ಎಂಬ ಹೆಸರಿನ ಪೌಷ್ಟಿಕಾಂಶ ಪೌಡರ್ ಅನ್ನು ಬಾಬು ನರ್ಸಿಂಗ್‌ಹೋಂನ ವೈದ್ಯೆಯೊಬ್ಬರು ನೀಡಿದ್ದರು. ಈ ಪೌಡರ್ ಅನ್ನು ಸೇವಿಸುವ ಸಂದರ್ಭದಲ್ಲಿ ಪೌಡರ್‌ನಲ್ಲಿ ಹುಳುಗಳು ಇದ್ದದ್ದು ಕಂಡು ಬಂದಿದೆ ಎಂದು ಆರೋಪಿಸಲಾಗಿದೆ.

 ಹುಳು ಮಿಶ್ರಿತವಾಗಿರುವ ಪೌಷ್ಟಿಕಾಂಶದ ಪೌಡರ್ ಸೇವಿಸಿದ ಬಾಣಂತಿಯರಿಗೆ ಅನಾಹುತವಾದರೆ ಯಾರು ಹೊಣೆಗಾರರು? ಬಾಣಂತಿಯರು, ಮಕ್ಕಳು ಹಾಗೂ ರೋಗಿಗಳಿಗೆ ಔಷಧಿ ನೀಡುವಾಗ ಎಚ್ಚರಿಕೆ ವಹಿಸಬೇಕು. ಜನರ ಪ್ರಾಣದೊಂದಿಗೆ ಚೆಲ್ಲಾಟವಾಡಬೇಡಿ ಎಂದು ವೈದ್ಯರ ವಿರುದ್ಧ ಹರಿಹಾಯ್ದರು.

ಆಸ್ಪತ್ರೆ ವೈದ್ಯ ಡಾ.ಬಾಬು ಮಾತನಾಡಿ, ಇಂತಹ ಕಳಪೆ ಪೌಡರ್‌ನ ಕಂಪೆನಿ ವಿರುದ್ಧ ನೀವು ದೂರು ಸಲ್ಲಿಸಿ, ಮುಂದೆ ಈ ರೀತಿಯ ಅನಾಹುತವಾಗದಂತೆ ನಾವು ಎಚ್ಚರವಹಿಸುತ್ತೇವೆ ಎಂದು ಮನವಿ ಮಾಡಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.