ADVERTISEMENT

ನಾಗರ ಹಾವಿನ ಹೊಟ್ಟೆಯಿಂದ ಮಾವಿನ ಹಣ್ಣಿನ ವಾಟೆ ಬಂತು!

​ಪ್ರಜಾವಾಣಿ ವಾರ್ತೆ
Published 1 ಜೂನ್ 2017, 7:47 IST
Last Updated 1 ಜೂನ್ 2017, 7:47 IST
ನಾಗರ ಹಾವಿನ ಹೊಟ್ಟೆಯಿಂದ ಮಾವಿನ ಹಣ್ಣಿನ ವಾಟೆ ಬಂತು!
ನಾಗರ ಹಾವಿನ ಹೊಟ್ಟೆಯಿಂದ ಮಾವಿನ ಹಣ್ಣಿನ ವಾಟೆ ಬಂತು!   

ಶಿರಸಿ : ಇಲ್ಲಿನ ಚಿಪಗಿಯ ಅಬ್ದುಲ್ ಅವರ ಮನೆಯ ಕೋಳಿ ಗೂಡಿಗೆ ಬಂದಿದ್ದ ನಾಗರ ಹಾವೊಂದು ಮೊಟ್ಟೆಯೆಂದು ತಿಳಿದು ಮಾವಿನ ಹಣ್ಣಿನ ವಾಟೆ (ವರಟೆ) ನುಂಗಲು ಯತ್ನಸಿದ  ಘಟನೆ ನಡೆದಿದೆ.

ಕೋಳಿ ಗೂಡಿನಲ್ಲಿ ಹಾವನ್ನು ಕಂಡ ಅಬ್ದುಲ್ ಮನೆಯವರು  ಉರಗ ತಜ್ಞ ಪ್ರಶಾಂತ ಹುಲೇಕಲ್ ಅವರಿಗೆ ಕರೆ ಮಾಡಿದ್ದಾರೆ. ಅವರು ಬಂದು ನೋಡಿದಾಗ ಹಾವು ಮಾವಿನ ಹಣ್ಣಿನ ವರಟೆ ನುಂಗಿರುವುದು ಗೊತ್ತಾಯಿತು. ಅವರು ಅತ್ಯಂತ ಚಾಣಾಕ್ಷತನದಿಂದ ಹಾವಿನ ಹೊಟ್ಟೆ ಸೇರಿದ್ದ ವರಟೆಯನ್ನು ಹೊರ ಹಾಕಿಸುವಲ್ಲಿ ಯಶಸ್ವಿಯಾದರು. ನಂತರ ಹಾವನ್ನು ಕಾಡಿಗೆ ಬಿಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT