ತುಮಕೂರು: ಹಿರಿಯ ಸ್ವಾತಂತ್ರ್ಯ ಹೋರಾಟ ಗಾರ್ತಿ, ಮಾಜಿ ಶಾಸಕಿ ಜೆ.ಸಿ.ಭಾಗೀರ ಥಮ್ಮ (90) ನಗರದಲ್ಲಿ ಭಾನುವಾರ ನಿಧನರಾದರು.ಅವರ ಅಂತ್ಯಕ್ರಿಯೆಯು ನಗರದಲ್ಲಿ ಭಾನುವಾರ ಸಂಜೆ ನಡೆಯಿತು.
ಭಾಗೀರಥಮ್ಮ ಅವರಿಗೆ ಇಬ್ಬರು ಪುತ್ರಿಯರು, ಮೂವರು ಪುತ್ರರು ಇದ್ದಾರೆ.
ಭಾಗೀರಥಮ್ಮ 1942ರ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿ 19 ತಿಂಗಳ ಜೈಲುವಾಸ ಅನುಭವಿಸಿದ್ದರು. ಇವರ ಪತಿ ಜೆ.ಆರ್.ಚೆಂಗಲಾರಾಧ್ಯ ಕೂಡ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು.
1960ರಲ್ಲಿ ತುಮಕೂರು ತಾಲ್ಲೂಕು ಬೋರ್ಡ್ ಸದಸ್ಯೆಯಾಗಿ ಆಯ್ಕೆಯಾಗಿದ್ದ ಭಾಗೀರಥಮ್ಮ, ನಂತರ 1962ರಲ್ಲಿ ತುಮಕೂರು ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಕರ್ನಾಟಕ ಸೋಷಿಯಲ್ ವೆಲ್‌ಫೇರ್ ಅಡ್ವೈಸರಿ ಬೋರ್ಡ್‌ನ ಸದಸ್ಯೆಯಾಗಿ 18 ವರ್ಷ ಕಾಲ ಸೇವೆ ಸಲ್ಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.