ADVERTISEMENT

ನೀಟ್: ಆಳ್ವಾಸ್‌ಗೆ ಶೇ 93.70 ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 3 ಜುಲೈ 2017, 19:30 IST
Last Updated 3 ಜುಲೈ 2017, 19:30 IST
ನೀಟ್: ಆಳ್ವಾಸ್‌ಗೆ ಶೇ 93.70 ಫಲಿತಾಂಶ
ನೀಟ್: ಆಳ್ವಾಸ್‌ಗೆ ಶೇ 93.70 ಫಲಿತಾಂಶ   

ಮೂಡುಬಿದಿರೆ: ‘ನೀಟ್’ನಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದು, ಶೇ 93.70 ರಷ್ಟು ಫಲಿತಾಂಶ ಪಡೆದಿದೆ. ಪರೀಕ್ಷೆ ಬರೆದಿದ್ದ 3,241 ಮಂದಿ ಪೈಕಿ, 3,037 ಮಂದಿ ತೇರ್ಗಡೆಯಾಗಿದ್ದಾರೆ.

ರಾಜ್ಯಮಟ್ಟದ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಪ್ರವೇಶಾತಿ ಸೀಟು ಹಂಚಿಕೆಯಲ್ಲಿ ಸಾಮಾನ್ಯವರ್ಗ, ಎಸ್ಸಿ, ಎಸ್ಟಿ, ಒಬಿಸಿ, ಹೈದರಾಬಾದ್ ಕರ್ನಾಟಕ ಹಾಗೂ ಕನ್ನಡ ಮಾಧ್ಯಮ ಕೋಟಾದಡಿ ಸಂಸ್ಥೆಯ 500 ವಿದ್ಯಾರ್ಥಿಗಳಿಗೆ ಪ್ರವೇಶ ಸಿಗುವುದು ಖಚಿತವಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಶ್ರೀನಾಥ್ ರಾವ್ (39ನೇ ರ್‍ಯಾಂಕ್‌),  ಭರತ್ ಕುಮಾರ್ (63), ನಕುಲ್ ಎನ್.ರಾವ್ (80), ವಿಕಾಸ್ ಜಿ.ಎಸ್. (90) ಅವರು 100 ರ ಒಳಗಿನ ರ್‍ಯಾಂಕ್‌ ಪಡೆದಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.