ADVERTISEMENT

ಪಕ್ಷ ಬದಲಿಸುವ ಜಾಯಮಾನ ನನ್ನದಲ್ಲ: ರೇವಣ್ಣ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2014, 19:30 IST
Last Updated 13 ಮಾರ್ಚ್ 2014, 19:30 IST

ಹಾಸನ: ‘ಪಕ್ಷ ಬದಲಿಸುವ ಜಾಯ­ಮಾನ ನನ್ನದಲ್ಲ, ಜೀವ ಇರುವವ­ರೆಗೂ ನಾನು ಜೆಡಿಎಸ್‌­ನಲ್ಲೇ ಇರುತ್ತೇನೆ’ ಎಂದು ಶಾಸಕ ಎಚ್‌.ಡಿ. ರೇವಣ್ಣ ಸ್ಪಷ್ಟಪಡಿಸಿದ್ದಾರೆ.

‘ರೇವಣ್ಣ ಕಾಂಗ್ರೆಸ್‌ ಪಕ್ಷ ಸೇರಲು ಕಸರತ್ತು ನಡೆಸಿದ್ದಾರೆ’ ಎಂದು ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎ. ಮಂಜು ಬುಧ­ವಾರ ಮಾಡಿದ್ದ ಆರೋಪಕ್ಕೆ ರೇವಣ್ಣ ಗುರುವಾರ ಪತ್ರಿಕಾ­ಗೋಷ್ಠಿ­ಯಲ್ಲಿ ಸ್ಪಷ್ಟನೆ ನೀಡಿದರು.

‘ಕಾಂಗ್ರೆಸ್‌ ಮುಳುಗುತ್ತಿರುವ ಹಡಗು. ನಾನೇಕೆ ಆ ಪಕ್ಷವನ್ನು ಸೇರಲಿ? ಈ ಲೋಕಸಭಾ ಚುನಾ­ವಣೆಯ ಬಳಿಕ ಕಾಂಗ್ರೆಸ್‌ ಅಸ್ತಿತ್ವ ಕಳೆದುಕೊಳ್ಳುತ್ತದೆ. ಆಗ ಯಾರು ಯಾವ ಪಕ್ಷಕ್ಕೆ ಹೋಗಲಿದ್ದಾರೆ ಎಂಬು­ದು ಗೊತ್ತಾಗಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.