ADVERTISEMENT

ಪರ್ಯಾಯ ರಾಜಕೀಯಕ್ಕಾಗಿ ಜನಾಂದೋಲನ: ಹಿರಿಯ ರಾಜಕಾರಣಿ ಎ.ಕೆ.ಸುಬ್ಬಯ್ಯ

‘ದೇಶಕ್ಕಾಗಿ ನಾವು ಐಕಾನ್‌–19’

​ಪ್ರಜಾವಾಣಿ ವಾರ್ತೆ
Published 19 ಜನವರಿ 2019, 19:05 IST
Last Updated 19 ಜನವರಿ 2019, 19:05 IST
ಎ.ಕೆ.ಸುಬ್ಬಯ್ಯ
ಎ.ಕೆ.ಸುಬ್ಬಯ್ಯ   

ಬೆಂಗಳೂರು: ‘ಚುನಾವಣಾ ರಾಜಕೀಯದಲ್ಲಿ ಪಾಲ್ಗೊಳ್ಳುವಂತೆ ರೈತರು ಹಾಗೂ ಯುವಕರನ್ನುಉತ್ತೇಜಿಸಲು ‘ದೇಶಕ್ಕಾಗಿ ನಾವು ಐಕಾನ್‌–19’ ಎನ್ನುವ ಜನಾಂದೋಲನವನ್ನು ಆರಂಭಿಸಲಾಗಿದೆ’ ಎಂದು ಹಿರಿಯ ರಾಜಕಾರಣಿ ಎ.ಕೆ.ಸುಬ್ಬಯ್ಯ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು,’ಈಗಾಗಲೇ ರಾಜ್ಯದಲ್ಲಿಆಂದೋಲನದ ನೋಂದಣಿ ಆರಂಭವಾಗಿದೆ. ಹತ್ತು ದಿನಗಳಲ್ಲಿ 500 ಜನ ಕಾರ್ಯಕರ್ತರು ನೋಂದಣಿ ಮಾಡಿಕೊಂಡಿದ್ದಾರೆ. 5,000 ನೋಂದಣಿ ಗುರಿ ಹೊಂದಲಾಗಿದೆ. ಮುಂದಿನ ತಿಂಗಳುಮೊದಲ ವಾರ ನೋಂದಾಯಿತ ಕಾರ್ಯಕರ್ತರ ಕಮ್ಮಟವನ್ನು ಆರಂಭಿಸಲಾಗುತ್ತದೆ’ ಎಂದು ಹೇಳಿದರು.

‘ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕಡೆಗಣಿಸಿದೆ. ಯುವಕರು, ರೈತರು ಮತ್ತು ತಳಸಮುದಾಯದವರಿಗೆ ಸರಿಯಾಗಿಸ್ಪಂದಿಸುತ್ತಿಲ್ಲ.ದೇಶದ ಆರ್ಥಿಕತೆ ಹದಗೆಟ್ಟು ಹೋಗಿದೆ. ಯುವಕರು ಉದ್ಯೋಗ ಅಭದ್ರತೆ ಸಮಸ್ಯೆ ಎದುರಿಸುತ್ತಿದ್ದಾರೆ’ ಎಂದು ಹೇಳಿದರು.

ADVERTISEMENT

‘ಯೋಗೇಂದ್ರ ಯಾದವ್‌ ರಾಷ್ಟ್ರಮಟ್ಟದಲ್ಲಿ ಆಂದೋಲನ ಆರಂಭಿಸಿದ್ದಾರೆ. ರಾಜ್ಯದಲ್ಲಿ ಸಾಹಿತಿ ದೇವನೂರು ಮಹಾದೇವ, ಸ್ವಾತಂತ್ರ್ಯಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಮತ್ತು ಚಿಂತಕ ಡಾ.ರಹಮತ್‌ ತರೀಕೆರೆ ಅವರು ಈ ಆಂದೋಲನದ ಭಾಗವಾಗಿದ್ದಾರೆ’ ಎಂದು ತಿಳಿಸಿದರು.

ಟಿ.ಪಿ.ಅಶೋಕ್‌ ಮಾತನಾಡಿ,‘ದೇಶದಲ್ಲಿ ಸಂವಿಧಾನಕ್ಕೆ ಅಪಾಯ ಬಂದೊದಗಿದೆ. ಅದಕ್ಕಾಗಿ ಕೋಮುವಾದಿಗಳನ್ನುಅಧಿಕಾರದಿಂದ ದೂರವಿಡಬೇಕಾಗಿದೆ. ಜವಾಬ್ದಾರಿಯುತ ನಾಗರಿಕರ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಆಂದೋಲನವನ್ನು ಆರಂಭಿಸಲಾಗುತ್ತಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.