ADVERTISEMENT

ಪುಸ್ತಕ ಪ್ರಕಾಶನದಿಂದ ಪ್ರಕಾಶಕರ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2018, 19:30 IST
Last Updated 2 ಮಾರ್ಚ್ 2018, 19:30 IST
ವಸುಂಧರಾ ಭೂಪತಿ
ವಸುಂಧರಾ ಭೂಪತಿ   

ಬೆಂಗಳೂರು: ಪುಸ್ತಕ ಪ್ರಕಾಶಕರ ಪ್ರಥಮ ಸಮ್ಮೇಳನ ಇದೇ 10ರಂದು ನಡೆಯಲಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ವಸುಂಧರಾ ಭೂಪತಿ ತಿಳಿಸಿದರು.

ಕನ್ನಡ ಭವನದ ನಯನ ಸಭಾಂಗಣದಲ್ಲಿ ನಡೆಯುವ ಸಮ್ಮೇಳನವನ್ನು ಎಚ್‌.ಎಸ್. ದೊರೆಸ್ವಾಮಿ ಉದ್ಘಾಟಿಸುವರು. ಮನೋಹರ ಗ್ರಂಥಮಾಲಾ ಪ್ರಕಾಶನದ ರಮಾಕಾಂತ ಜೋಶಿ ಅವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಅವರು ಮಾಧ್ಯಮ ಗೋಷ್ಠಿಯಲ್ಲಿ ಶುಕ್ರವಾರ ಹೇಳಿದರು.‌‌

ಸಮಾರಂಭದಲ್ಲಿ ಹಿರಿಯ ಪ್ರಕಾಶಕರನ್ನು ಗೌರವಿಸಲಾಗುತ್ತದೆ. ಕಲಬುರ್ಗಿಯ ಅಪ್ಪಾರಾವ್ ಅಕ್ಕೋಣಿ, ಗದಗದ ಜಯದೇವ ಮೆಣಸಗಿ, ಅಥಣಿಯ ಸಿದ್ಧಣ್ಣ ಉತ್ನಾಳ, ಬಳ್ಳಾರಿಯ ಚೆನ್ನಬಸವಣ್ಣ, ಹುಬ್ಬಳ್ಳಿಯ ಹನುಮಾಕ್ಷಿ ಗೋಗಿ, ಉಡುಪಿಯ ಇಂದಿರಾ ಹಾಲಂಬಿ, ಮೈಸೂರಿನ ಶ್ರೀನಿವಾಸ, ಕಾಂತಾವರ ಕನ್ನಡ ಸಂಘದ ನಾ. ಮೊಗಸಾಲೆ, ಬೆಂಗಳೂರಿನ ಡಿ.ಕೆ.ಶ್ಯಾಮಸುಂದರರಾವ್, ಮಂಗಳೂರಿನ ಗೋಪಾಲಕೃಷ್ಣ ಭಟ್ಟ, ಬೆಂಗಳೂರಿನ ಎನ್‌.ಪಿ. ಪುಟ್ಟಣ್ಣಯ್ಯ, ಚಿಕ್ಕನಾಯಕನಹಳ್ಳಿಯ ಎಂ.ವಿ. ನಾಗರಾಜರಾವ್, ಪಲ್ಲವ ವೆಂಕಟೇಶ್, ಜಾಣಗೆರೆ ವೆಂಕಟರಾಮಯ್ಯ, ಉಮೇಶ್ ನಾಗಮಂಗಲ, ಮೈಸೂರಿನ ಲೋಕಪ್ಪ, ಬೆಂಗಳೂರಿನ ಕಾವ್ಯಕಲಾ ಪ್ರಕಾಶನ, ಟಿ.ಎನ್. ಕೃಷ್ಣಯ್ಯಶೆಟ್ಟಿ ಅಂಡ್ ಸನ್ಸ್, ಜನಪದ ಪ್ರಕಾಶನ, ಸಾಗರದ ರವೀಂದ್ರ ಪುಸ್ತಕಾಲಯದ ಮುಖ್ಯಸ್ಥರನ್ನು ಸನ್ಮಾನಕ್ಕೆ ಆಯ್ಕೆ ಮಾಡಲಾಗಿದೆ ಎಂದು ಅವರು ವಿವರಿಸಿದರು.

ADVERTISEMENT

ಪ್ರಾಧಿಕಾರದಲ್ಲಿ 500ಕ್ಕೂ ಹೆಚ್ಚು ಪ್ರಕಾಶಕರು ನೋಂದಾಯಿಸಿಕೊಂಡಿದ್ದು, ಎಲ್ಲರ ವಿವರ ಒಳಗೊಂಡ ಕೈಪಿಡಿಯನ್ನೂ ಸಮ್ಮೇಳನದಲ್ಲಿ ಬಿಡುಗಡೆ ಮಾಡಲಾಗುತ್ತಿದೆ ಎಂದರು.

ಇದೇ 5 ಮತ್ತು 6ರಂದು ದಾವಣಗೆರೆಯಲ್ಲಿ ದಲಿತ ಸಾಹಿತ್ಯ ಸಮ್ಮೇಳನ ನಡೆಸಲಾಗುತ್ತಿದ್ದು, ಎಲ್‌. ಹನುಮಂತಯ್ಯ ಅವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದೂ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.