ADVERTISEMENT

ಪೆಂಟಾವಲೆಂಟ್‌ ಲಸಿಕೆಯಿಂದ ಮಗು ಸಾವು: ಆರೋಪ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2018, 19:30 IST
Last Updated 6 ಏಪ್ರಿಲ್ 2018, 19:30 IST

ಮಂಡ್ಯ: ತಾಲ್ಲೂಕಿನ ಸೂನಗಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಾಕಿದ ಪೆಂಟಾವಲೆಂಟ್‌ ಲಸಿಕೆಯಿಂದ ಎರಡೂವರೆ ತಿಂಗಳ ಮಗು ಮೃತಪಟ್ಟಿದೆ ಎಂದು ಪೋಷಕರು ಆರೋಪಿಸಿದ್ದಾರೆ.

ನಂದೀಶ್‌– ಶಿಲ್ಪಾ ದಂಪತಿ ತಮ್ಮ ಹೆಣ್ಣು ಮಗುವಿಗೆ ಗುರುವಾರ ಪೆಂಟಾವಲೆಂಟ್‌ ಲಸಿಕೆ ಹಾಕಿಸಿದ್ದರು. ಶುಕ್ರವಾರ ಬೆಳಿಗ್ಗೆ ಪ್ರಜ್ಞೆ ತಪ್ಪಿ ಮಗು ಅಸ್ವಸ್ಥಗೊಂಡಿದ್ದು, ನಗರದ ಮಿಮ್ಸ್‌ ಆಸ್ಪತ್ರೆಗೆ ತರುವಷ್ಟರಲ್ಲಿ ಮೃತಪಟ್ಟಿದೆ.

‘ಲಸಿಕೆ ಹಾಕಿಸಿದಾಗ ಮಗು ಆರೋಗ್ಯವಾಗಿತ್ತು. ಮಗುವಿನ ಸಾವಿಗೆ ಪೆಂಟಾವಲೆಂಟ್‌ ಲಸಿಕೆಯೇ ಕಾರಣ’ ಎಂದು ಪೋಷಕರು ದೂರಿದ್ದಾರೆ.

ADVERTISEMENT

‘ಗುರುವಾರ ಬೆಳಿಗ್ಗೆ 10.30ರಲ್ಲಿ ಪೆಂಟಾವಲೆಂಟ್‌ ಲಸಿಕೆ ಹಾಕಿಸಿದ್ದಾರೆ. ಮಗು ರಾತ್ರಿಯೆಲ್ಲಾ ಆರೋಗ್ಯವಾಗಿದ್ದು, ಲಸಿಕೆಯಿಂದ ಮೃತಪಟ್ಟಿಲ್ಲ. ಶುಕ್ರವಾರ ಬೆಳಿಗ್ಗೆ ಮಗುವಿಗೆ ಸ್ನಾನ ಮಾಡಿಸುವಾಗ ಮೂರ್ಛೆ ಕಾಣಿಸಿಕೊಂಡಿದೆ. ಬೇಸಿಗೆಯಲ್ಲಿ ಹೆಚ್ಚು ಸುಡುವ ನೀರಿನಿಂದ ಸ್ನಾನ ಮಾಡಿಸಿದರೆ ಮೂರ್ಛೆ ರೋಗ ಕಾಣಿಸಿಕೊಳ್ಳುವ ಅಪಾಯವಿದೆ. ಶವದ ಮರಣೋತ್ತರ ಪರೀಕ್ಷೆ ನಡೆಸಿ ವರದಿ ನೀಡಲಾಗುವುದು’ ಎಂದು ಆರೋಗ್ಯ ಇಲಾಖೆ ತಾಯಿ–ಮಕ್ಕಳ ಆರೋಗ್ಯ ಅಭಿವೃದ್ಧಿ ಅಧಿಕಾರಿ ಡಾ.ರೋಚನಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.